Texty
ಅಲಲೇ ಸುಕುಮಾರಿ
ಕಣ್ಣಿನಲೇ ಹಾಕ್ತಿಯಲ್ಲೇ ಚೂರಿ
ಅಲಲೇ ಸುಕುಮಾರಿ
ಏನೇ ಗತಿ ಹೋದ್ರೆ ಜೀವ ಹಾರಿ
ನಿನ್ನ ಕಂಡ ಆಮೇಲೆ, ಬೇರೆ ಎಲ್ಲ ಮಾಮೂಲೇ
ಯಾರೇ ನೀನು ಓ ಬಾಲೆ
ಇನ್ನು ನನ್ನ ಸಿರಿ ನನ್ನ ಗುರಿ ಎಲ್ಲಾ ನೀನೇ, ನೀನೇ
ಅಲಲೇ ಸುಕುಮಾರಿ
ಕಣ್ಣಿನಲೇ ಹಾಕ್ತಿಯಲ್ಲೇ ಚೂರಿ
ಇಷ್ಟು ವರ್ಷ ಹೇಗೋ ತುಂಬಾ ಜೋಪಾನ, ನನ್ನ ಕಾದುಕೊಂಡೆನಾ
ಮನಸನು ಕೆಡಿಸಿದ ಹುಡುಗ ನೀನೇ, ನೀನೇ
ಹೃದಯದಿ ನೆಲೆಸಿದ ಹುಡುಗ
ಕೊಡುಗೆ ಕೊಡುವೆ ಬರಿ ಖುಷಿಯೊಂದೇ ನಿಂಗೆ ಬದುಕಲ್ಲೇ
ನನ್ನ ಪ್ರಾಣ ಸ್ನೇಹಿತ
ನಿನ್ನ ಸಂಗವೇ ಹಿತ
ಬರಿ ನಾನು ನೀನು ಪ್ರೀತಿ ಇರೋ ಲೋಕವೊಂದೇ ಸಾಕು
ಅಲಲೇ ಸುಕುಮಾರಿ
ಕಣ್ಣಿನಲೇ ಹಾಕ್ತಿಯಲ್ಲೇ ಚೂರಿ
ಮತ್ತೆ ಮತ್ತೆ ನಿನ್ನ ಕದ್ದು ನೋಡೋಕೆ ನನಗಾಸೆ ಹೀಗೇಕೆ
ಜೊತೆ ಜೊತೆ ನಡೆಯುವ ಘಳಿಗೆ
ನಾನೇ ರಾಣಿ ಅನಿಸಿದೆ ಕಣೋ ಇಡೀ ಜಗಕೆ
ನನಗೆ ದೊರೆವ ಪ್ರತಿಕ್ಷಣ ಇನ್ನು ಮುಂದೆ ನಿನಗೇನೆ
ನನ್ನ ಎಲ್ಲ ನೆಮ್ಮದಿ ನಿನ್ನ ತೋಳಿನಲ್ಲಿದೆ
ನನ್ನ ಅಂಗೈಲಿಟ್ಟು ಕಾಯುತ್ತೀನಿ ಇನ್ನು ಎಂದೂ ನಿನ್ನ
ಅಲಲೇ ಸುಕುಮಾರಿ
ಕಣ್ಣಿನಲೇ ಹಾಕ್ತಿಯಲ್ಲೇ ಚೂರಿ
ಅಲಲೇ ಸುಕುಮಾರಿ
ಏನೇ ಗತಿ ಹೋದ್ರೆ ಜೀವ ಹಾರಿ
Written by: Arjun Janya, Kaviraj