Texty
ಚೆಲುವೇ, ಒಂದು ಕೇಳ್ತೀನೀ, ಇಲ್ಲ ಅನ್ದೆ ಕೊಡ್ತೀಯಾ?
ನಿನ್ನ ಪ್ರೀತಿ ಮಾಡ್ತೀನಿ, ಮನಸು, ಹೃದಯ ಕೊಡ್ತೀಯಾ?
ಮನಸಿನ ಆಸೆ ಹೇಳಲೇನು?
ಮುದ್ದಾದ ಗೊಂಬೆ ನೀನು, ಮುತ್ತಂಥ ಹೆಣ್ಣು ನೀನು
ನಾ ನಿನಗೆ ಜೋಡಿ ಅಲ್ಲವೇನು?
ಚೆಲುವ, ಒಂದು ಹೇಳ್ತೀನಿ, ಇಲ್ಲ ಅನ್ದೆ ಕೇಳ್ತೀಯಾ?
ನಿನ್ನ ಪ್ರೀತಿ ಮಾಡ್ತೀನಿ, ಹೇಳೋ ಕೆಲಸ ಮಾಡ್ತೀಯಾ?
ನಿಜವಾದ ಗಂಡೇ ಆದ್ರೆ ನೀನು
ಹೆಣ್ಣನ್ನ ಗೆಲ್ಲೋ ನೀನು, ಮನಸನ್ನ ಕದಿಯೋ ನೀನು
ಆಮೇಲೆ ಪ್ರೀತಿ ಅಲ್ಲವೇನು?
ನಿನ್ನ ಪ್ರೀತಿ ಗೆಲ್ಲೋಕೆ ಪ್ರಾಣವನ್ನೇ ಕೊಡ್ತೀನಿ
ಹೌದಾ?
ಹೈದ
ಪರವಾಗಿಲ್ವೆ
ನಿನ್ನ ಮನಸು ಕದಿಯೋಕೆ ಏಳು ಜನ್ಮ ಕಾಯ್ತೀನಿ
ಹೌದಾ?
ಅರೆರೆ
ಪರವಾಗಿಲ್ವೆ
ಪ್ರೀತಿಗಾಗಿ ಲೋಕವನ್ನೇ ಜಯಿಸಬಲ್ಲೆ ನಾ
ಹೌದಾ, ವೀರ? ಜೋಕುಮಾರ, ಮಾತು ನಿಜವೇನಾ?
ಚೆಲುವೇ, ಒಂದು ಕೇಳ್ತೀನೀ, ಇಲ್ಲ ಅನ್ದೆ ಕೊಡ್ತೀಯಾ?
ನಿನ್ನ ಪ್ರೀತಿ ಮಾಡ್ತೀನಿ, ಹೇಳೋ ಕೆಲಸ ಮಾಡ್ತೀಯಾ?
ಧೈರ್ಯ ಇಲ್ಲದವರಲ್ಲಿ ಹೇಗೆ ಮನಸು ನೀಡಲೋ?
ಹೌದಾ?
ಅಯ್ಯೋ, ಮುಂದೇನ್ ಗತಿ?
ಶೌರ್ಯ ಇಲ್ಲದವರನ್ನು ಹೇಗೆ ಪ್ರೀತಿ ಮಾಡಲೋ?
ಅಯ್ಯಯ್ಯೋ, ಹೌದಾ?
ಇನ್ನೇನ್ ಗತಿ?
ವೀರನಂಥ, ಶೂರನಂಥ ಪ್ರೇಮಿ ನನ್ನವನು
ನಿನ್ನ ಹಾಗೆ ಹೇಡಿ ಅಲ್ಲ ನನ್ನ ಮನ್ಮಥನು
ಚೆಲುವೇ, ಒಂದು ಕೇಳ್ತೀನೀ, ಇಲ್ಲ ಅನ್ದೆ ಕೊಡ್ತೀಯಾ?
ನಿನ್ನ ಪ್ರೀತಿ ಮಾಡ್ತೀನಿ, ಮನಸು, ಹೃದಯ ಕೊಡ್ತೀಯಾ?
ನಿಜವಾದ ಗಂಡೇ ಆದ್ರೆ ನೀನು
ಹೆಣ್ಣನ್ನ ಗೆಲ್ಲೋ ನೀನು, ಮನಸನ್ನ ಕದಿಯೋ ನೀನು
ಆಮೇಲೆ ಪ್ರೀತಿ ಅಲ್ಲವೇನು?
Written by: Hamsalekha