Hudební video

Hudební video

Texty

ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
ನಿನ್ನ ಒಂದು ಸ್ಪರ್ಶ
ನಂಗೆ ನೂರು ವರುಷ
ನಿನ್ನ ನೆರಳಿಗಾಗಿ ಸೋತೇ
ನೂರಾರು ಮುಳ್ಳುಗಳಾ ನಡುವೆ ಹೂವಿದೆ
ನೂರಾರು ನೋವುಗಳಾ ನಡುವೆ ಒಲವಿದೆ
ನಿನಗಾಗಿ ಎದೆಯಲ್ಲಿ ಒಂದು ಹಾಡಿದೆ
ತಿಳಿತಿಳಿತಿಳಿದು ಏಕಿರುವೆ ಮಾತನಾಡದೆ
ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೆ
ಆ ಮೋಡದಿಂದ ಮಳೆಗೆ ಒಂದು ಸ್ಪೂರ್ತಿ ಇದೆ
ತಂಗಾಳಿಯಿಂದ ಹೂವಿಗೊಂದು ಕೀರ್ತಿ ಇದೆ
ನಿನ್ನ ಹೃದಯದಾಣೆ ಹೃದಯದಲ್ಲಿ ಪ್ರೀತಿ ಇದೆ
ಆ ಕಥೆಗಳೆಲ್ಲ ಕಣ್ಣ ತುಂಬಿ ನೀರಾಗಿದೆ
ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು
ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು
ಕ್ಷಮಿಸು ಬಾ ಒಮ್ಮೆ ಕ್ಷಮಿಸುಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೆ
ಸಹಪ್ರೇಮಿಗಾಗಿ ಪ್ರೇಮಿಯೊಬ್ಬ ಇರದಾ ಕ್ಷಣ
ಈ ತಿರುಗೋ ಭೂಮಿ ತಿರುಗದೆಂದು ಒಂದೂ ಕ್ಷಣಾ
ಇಲ್ಲಿ ಸನಿಹವುಂಟು ವಿರಹವುಂಟು ಪ್ರತೀ ದಿನಾ
ಪ್ರತಿ ಹೆಜ್ಜೆಯಲ್ಲೂ ಕಾಯಬೇಕು ಮನಾಮನ
ನನ್ನಾಣೆಗೂ ನಿನ್ನಾ ಬಾಳೆಲ್ಲಾ ಬೆಳಕಿರಲೀ
ನಿನ್ನ ನಾಳೆಗಳೆಲ್ಲ ನಾ ನೆನೆಯೋ ಹಾಗಿರಲೀ
ನನ್ನಾಣೆಗೂ ನಿನ್ನಾ ಬಾಳೆಲ್ಲಾ ಬೆಳಕಿರಲೀ
ನಿನ್ನ ನಾಳೆಗಳೆಲ್ಲ ನಾ ನೆನೆಯೋ ಹಾಗಿರಲೀ
ಬಾ ಕ್ಷಮಿಸು ಬಾ ಇಂದೇ ಕ್ಷಮಿಸು ಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೆ
ನೂರಾರು ಮುಳ್ಳುಗಳಾ ನಡುವೆ ಹೂವಿದೆ
ನೂರಾರು ನೋವುಗಳಾ ನಡುವೆ ಒಲವಿದೆ
ನಿನಗಾಗಿ ಎದೆಯಲ್ಲಿ ಒಂದು ಹಾಡಿದೆ
ತಿಳಿತಿಳಿತಿಳಿದು ಏಕಿರುವೆ ಮಾತನಾಡದೆ
ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೆ
Written by: Babji Babji, Babji-Sandeep, K. Kalyan
instagramSharePathic_arrow_out

Loading...