Texty
ನಿನ್ನ ನೆನಪೇ ನನ್ನ ಚಲಿಸುವ ಗಡಿಯಾರ
ಎದೆಮಿಡಿತದ ಅನುಸಾರ
ನಿನ್ನ ಹೆಸರೇ ನನ್ನ ದಿನಚರಿ ಪುಟತುಂಬ
ಅದು ಮನಸಿನ ಪ್ರತಿಬಿಂಬ
ಅಗಲಿ ನಿನ್ನ ಉಳಿವೆ ಹೀಗೆ
ಅದೆ ನೋಡು ಆಶ್ಚರ್ಯ
ನಿನ್ನ ನೆನಪೇ ನನ್ನ ಚಲಿಸುವ ಗಡಿಯಾರ
ಎದೆಮಿಡಿತದ ಅನುಸಾರ
ನಾನು ಗುನುಗೋ ಹಾಡಿನಲ್ಲಿ
ಬಂತು ನೋಡು ನಿಂದೇ ಸಾಲು
ಖಾಸಾ ನನ್ನ ಆಸೆಯಲ್ಲಿ
ಎಂದಿಗೂ ನೀನೇ ಶಾಮೀಲು
ಸಂಗೀತ ಮಂಕಾಯಿತು
ಸಂಗಾತಿ ನೀನಿಲ್ಲದೆ
ಗಾಳಿಯು ಬೀಸದು ನೀನು ಬರದೇ
ಅದರೂನು ನಗುವೇ ನಾನು
ಅದೆ ನೋಡು ಆಶ್ಚರ್ಯ
ನಿನ್ನ ನೆನಪೇ, ನನ್ನ ಚಲಿಸುವ ಗಡಿಯಾರ
ಎದೆಮಿಡಿತದ ಅನುಸಾರ
ಹೋದಲ್ಲೆಲ್ಲಾ ನನ್ನ ಪಕ್ಕ
ಖಾಲಿ ಖಾಲಿ ನಿನ್ನ ಜಾಗ
ಅಪ್ಪಿ ತಪ್ಪಿ ಸಿಕ್ಕಬಹುದು
ಎನ್ನುವ ಆಸೆ ಆಗಾಗ
ನನ್ನನು ಕಾಪಾಡುವ ರಹಸ್ಯ ನೀನಲ್ಲವೇ
ಸುಳ್ಳೇ ನೀ ಸಿಕ್ಕರೂ ನಂಬಿಬಿಡುವೆ
ದೂರವಿದ್ದು ಸನಿಹ ಬಂದೆ
ಅದೆ ನೋಡು ಆಶ್ಚರ್ಯ
ನಿನ್ನ ನೆನಪೇ ನನ್ನ ಚಲಿಸುವ ಗಡಿಯಾರ
ಎದೆಮಿಡಿತದ ಅನುಸಾರ
Written by: Jayanth Kaikini, V. Harikrishna