Στίχοι

[Chorus]
ಐಶ್ವರ್ಯ, ಐಶ್ವರ್ಯ, ನೀ ನನ್ನ ಉಸಿರು ಕಣೇ
ನಿನ್ನಲ್ಲು ನನ್ನಲ್ಲು ಈ ಪ್ರೀತಿ ಒಂದೇ ಕಣೇ
ಹೇಳು ನಿನಗಾಗಿ ನಾನಿಲ್ಲವೇನು
ಪ್ರೀತಿನೆ ಉಸಿರಲ್ಲವೆನು ನೀನೆ, ನಾನು
[Refrain]
ಐಶ್ವರ್ಯ, ಐಶ್ವರ್ಯ, ಐಶ್ವರ್ಯ, ಐಶ್ವರ್ಯ
[Verse 1]
ನಾನೊಂದು ಪಂಜರ ನೀನಲ್ಲಿ ಇಂಚರ
ನೀ ಹಾಡಿದಾಗಲೆ ನಮ ಪ್ರೀತಿ ಸುಂದರ
ಬಾ ನನ್ನ ಹತ್ತಿರ ಬೇಕಿಲ ಅಂತರ
ನಾವೊಂದೇ ಆದರೆ ಸುಖವೇ ನಿರಂತರ
ಈ ಪ್ರೀತಿ ಎಂದು ನಿನಗಾಗಿ
ಕಾಯುತಿದೆ ಗೀಳಿಯಾಗಿ
ನಿನ್ನದೇಯ ಮಾತು ತಿಳಿಸು
ಮನಸಾರೆ ಹಿತವಾಗಿ
[Chorus]
ಐಶ್ವರ್ಯ, ಐಶ್ವರ್ಯ, ನೀ ನನ್ನ ಉಸಿರು ಕಣೇ
ನಿನ್ನಲ್ಲು ನನ್ನಲ್ಲು ಈ ಪ್ರೀತಿ ಒಂದೇ ಕಣೇ
ಹೇಳು ನಿನಗಾಗಿ ನಾನಿಲ್ಲವೇನು
ಪ್ರೀತಿನೆ ಉಸಿರಲ್ಲವೆನು ನೀನೆ, ನಾನು
[Verse 2]
ನೀ ಸ್ವರಗಳಾದರೆ ನಾ ಕವಿತೆ ಯಾಗುವೆ
ನೀ ಕಾಣದಾದರೆ ಕಲ್ಲಾಗಿ ಹೋಗುವೆ
ನೀ ಅಪ್ಪಿಕೊಳ್ಳದೆ ಎದ್ದೇ ಬಡಿತ ಎಲ್ಲಿದೆ?
ನೀನೆಲ್ಲೆ ಹೋದರು ನನ್ನುಸಿರು ಅಲ್ಲಿದೇ
ನಿಜವಾಗಿ ಹೇಳು ಎಲ್ಲಿರುವೆ?
ನನ ಬಿಟ್ಟು ಹೇಗಿರುವೆ?
ಈ ಪ್ರಾಣ ಹೋದರು ಸರಿಯೇ
ನಿನಗಾಗಿ ಕಾದಿರುವೆ
[Chorus]
ಐಶ್ವರ್ಯ, ಐಶ್ವರ್ಯ, ನೀ ನನ್ನ ಉಸಿರು ಕಣೇ
ನಿನ್ನಲ್ಲು ನನ್ನಲ್ಲು ಈ ಪ್ರೀತಿ ಒಂದೇ ಕಣೇ
ಹೇಳು ನಿನಗಾಗಿ ನಾನಿಲ್ಲವೇನು
ಪ್ರೀತಿನೆ ಉಸಿರಲ್ಲವೆನು ನೀನೆ, ನಾನು
Written by: K. Kalyan, Rajesh Ramanath, V.Nagendra Prasad
instagramSharePathic_arrow_out

Loading...