गाने

ಅದೇ ಭೂಮಿ ಅದೇ ಬಾನು ಈ ನಯನ ನೂತನ
ಅದೇ ದಾರಿ ಅದೇ ತಿರುವು ಈ ಪಯಣ ನೂತನ
ನನ್ನ ಮೋಡ
ನನ್ನ ಹಾಡು
ನನ್ನ ಕನಸೇ ಒಮ್ಮೆ ನೋಡು ನನ್ನ ಚೆಲುವಿನ ನಂದನ
ಏನೋ ಮಧುರ ಈ ಬಂಧನ
ಅದೇ ಭೂಮಿ ಅದೇ ಬಾನು ಈ ನಯನ ನೂತನ
ಉದಯ ಕಿರಣ ಸೆಳೆದಾಗ
ಹೂವ ಹನಿಯು ಹೊಳೆದಾಗ
ಋತುವಿನ ಬಂಧನ
ಹೃದಯ ಕಣ್ಣಲ್ಲಿ ಉಲಿವಾಗ
ಬೆರೆತು ಈ ಜೀವ ನಲಿವಾಗ
ಒಲವಿನ ಬಂಧನ
ಅದೇ ಭೂಮಿ ಅದೇ ಬಾನು ಈ ನಯನ ನೂತನ
ಅದೇ ದಾರಿ ಅದೇ ತಿರುವು ಈ ಪಯಣ ನೂತನ
ನನ್ನ ಮೋಡ
ನನ್ನ ಹಾಡು
ನನ್ನ ಕನಸೇ ಒಮ್ಮೆ ನೋಡು ನನ್ನ ಚೆಲುವಿನ ನಂದನ
ಏನೋ ಮಧುರ ಈ ಬಂಧನ
ಕನಸಿನ ನೂರು ಎಳೆಯಿಂದ
ನೇಯುವ ಗೂಡು ಸಂಬಂಧ
ನಲುಮೆಯ ಬಂಧನ
ಯಾರೋ ಕರೆದಂತೆ ದೂರಿಂದ
ಗರಿಯ ತೆರೆದಂಥ ಮರಿ ಚೆಂದ
ಗೆಲುವಿನ ಬಂಧನ
ಅದೇ ಭೂಮಿ ಅದೇ ಬಾನು ಈ ನಯನ ನೂತನ
ಅದೇ ದಾರಿ ಅದೇ ತಿರುವು ಈ ಪಯಣ ನೂತನ
ನನ್ನ ಮೋಡ
ನನ್ನ ಹಾಡು
ನನ್ನ ಕನಸೇ ಒಮ್ಮೆ ನೋಡು ನನ್ನ ಚೆಲುವಿನ ನಂದನ
ಏನೋ ಮಧುರ ಈ ಬಂಧನ
ಅದೇ ಭೂಮಿ ಅದೇ ಬಾನು ಈ ನಯನ ನೂತನ
Written by: Jayant Kaikini, Mano Murthy
instagramSharePathic_arrow_out

Loading...