गाने
ನಾನಾಡದ ಮಾತೆಲ್ಲವ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
ನೀ ತೋರುವ ಮುಂಗೋಪವ ಮುದ್ದಾಗಿಸು
ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು
ಓದದಾ ಪುಸ್ತಕ ನಾನು
ಎದೆಗೊತ್ತಿಕೊಳ್ಳುವೆಯೇನು ಬಿಸಿಯ ಉಸಿರು ನೀಡಿ
ಪ್ರತಿ ಸಾಲನೂ ಕಥೆಯಾಗಿಸು
ನಾನಾಡದ ಮಾತೆಲ್ಲವ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
ಮಧುರ ಕನಸಿನ ಕದಾ
ತೆರೆದೆ ಇಡುವೆನು ಸದಾ
ಒಂಟಿ ನಾನಾದರೂ ಸಂಭಾವಿತಾ
ಸರಳ ಸಂಗತಿಯಲಿ
ಸಲಿಗೆ ಸಂಭವಿಸಲಿ
ಜಂಟಿ ಅಭ್ಯಾಸಕೆ ಸುಸ್ವಾಗತ
ತೆರೆಯ ಮರೆಯ ವಿಷಯ ತುಂಬಾ ಇದೆ
ಕೃಪೆಯ ಹಿಂಬಾಲಿಸು
ನಿನ್ನ ಸೆಳೆತದ ಸವಿ
ಬರೆಯಲಾರನು ಕವಿ
ಮನದಿ ಬರಿ ನಿನ್ನದೇ ಚಿತ್ರೋತ್ಸವ
ಪಂಚನಾಮೆಯ ಬಿಡು
ಪ್ರಥಮ ಚಿಕಿತ್ಸೆಯ ಕೊಡು
ಮಾಡಿ ಸದ್ದಿಲ್ಲದ ಅಪಘಾತವ
ಉಭಯ ಹೃದಯ ಅದಲು ಬದಲಾದರೆ
ನೀನೇನೆ ಸಂಭಾಳಿಸು
ನಾನಾಡದ ಮಾತೆಲ್ಲವ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
ನೀ ತೋರುವ ಮುಂಗೋಪವ ಮುದ್ದಾಗಿಸು
ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು
Written by: Arjun Janya, Jayanth Kaikini