गाने

ನೀನಾದೆ ನಾ ನೀನೊಲಿದ ಈ ಕ್ಷಣ
ನಿನ್ನಿಂದಲೇ ಹೊಸದೇನೊ ತಲ್ಲಣ
ಮಾತೇ ಬರುತಿಲ್ಲ ಯಾಕೋ ಗೊತ್ತಿಲ್ಲ
ಮೌನಿ ನಾನಾದೆ ಈ ದಿನ
ಹೇಗೋ ನಾನಿದ್ದೆ ಈಗ ಹೀಗಾದೆ
ಅದಕೆ ನೀ ತಾನೆ ಕಾರಣ
ನೀನಾದೆ ನಾ ನೀನೊಲಿದ ಈ ಕ್ಷಣ
ನಿನ್ನಿಂದಲೇ ಹೊಸದೇನೊ ತಲ್ಲಣ
ತೇಲಿದೆ ಮನ ನಿನ್ನ ನಗುವಿನ ಆ ತಿಳಿ ಆಗಸದಲಿ
ಜಾರಿದೆ ಕ್ಷಣ ನಿನ್ನ ಒಲವಿನ ಸಿಹಿಯಾದ ಅಪ್ಪುಗೆಯಲಿ
ತೇಲಿದೆ ಮನ ನಿನ್ನ ನಗುವಿನ ಆ ತಿಳಿ ಆಗಸದಲಿ
ಜಾರಿದೆ ಕ್ಷಣ ನಿನ್ನ ಒಲವಿನ ಸಿಹಿಯಾದ ಅಪ್ಪುಗೆಯಲಿ
ಸೆಳೆದೇ ಕಣ್ಣಲೇ ಬೆರೆತೆ ನನ್ನಲೇ
ಸೆಳೆದೇ ಕಣ್ಣಲೇ ಬೆರೆತೆ ನನ್ನಲೇ
ಪ್ರೀತಿ ಅರಮನೆ ನನ್ನ ಸೆರೆಮನೆ ನಾ ಬಂಧಿ ಆಗಿರುವೆನೇ
ಬಿಡುಗಡೆಯನೇಎಂದೂ ಬಯಸದ ನಾ ಪ್ರೇಮಖೈದಿ ಕಣೇ
ಪ್ರೀತಿ ಅರಮನೆ ನನ್ನ ಸೆರೆಮನೆ ನಾ ಬಂಧಿ ಆಗಿರುವೆನೇ
ಬಿಡುಗಡೆಯನೇ ಎಂದೂ ಬಯಸದ ನಾ ಪ್ರೇಮಖೈದಿ ಕಣೇ
ಬರೆದೆ ಉಸಿರಲೇ ನಿನ್ನ ಹೆಸರನೇ
ಬರೆದೆ ಉಸಿರಲೇ ನಿನ್ನ ಹೆಸರನೇ
ನೀನಾದೆ ನಾ ನೀನೊಲಿದ ಈ ಕ್ಷಣ
ನಿನ್ನಿಂದಲೇ ಹೊಸದೇನೊ ತಲ್ಲಣ
ಮಾತೇ ಬರುತಿಲ್ಲ ಯಾಕೋ ಗೊತ್ತಿಲ್ಲ
ಮೌನಿ ನಾನಾದೆ ಈ ದಿನ
ಹೇಗೋ ನಾನಿದ್ದೆ ಈಗ ಹೀಗಾದೆ
ಅದಕೆ ನೀತಾನೇ ಕಾರಣ
ನೀನಾದೆ ನಾ ನೀನೊಲಿದ ಈ ಕ್ಷಣ
ನಿನ್ನಿಂದಲೇ ಹೊಸದೇನೊ ತಲ್ಲಣ
(ತಲ್ಲಣ ತಲ್ಲಣ)
Written by: G. Abhiman Roy, SUSHIM SANGHASENA
instagramSharePathic_arrow_out

Loading...