Video musicale

Video musicale

Testi

ಹೇ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡವೇ ಸತ್ಯ
ಹೇ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡವೇ ನಿತ್ಯ
ನಮ್ಮ ನೆಲ ನಮ್ಮ ಜಲ ನಮ್ಮ ನುಡಿ ಧ್ವನಿಯಾಗಿ
ಮುಂದೆ ಸಾಗಿ ಭಾಷೆಗಾಗಿ ನಾವು ನೀವು ಒಟ್ಟಾಗಿ
ಈ ನ್ಯಾಯ ಕೇಳೋ ಕೂಗಿ ಹೇಳೋ ಕರುನಾಡ ಕಲಿ ನಾನು
(ಕನ್ನಡಿಗ... ಓ... ಕನ್ನಡಿಗ... ಓ
ಕನ್ನಡಿಗ... ಓ... ಕನ್ನಡಿಗ... ಓ)
ಕಲಿಯೋ ಕಲಿಸೋ ತಿದ್ದಿ ತಿಳಿಸೋ ನಮ್ಮ ಭಾಷೆ ಪ್ರಾಚೀನ
ಅಮ್ಮ ಅನ್ನೋ ಪದವ ಕೊಟ್ಟ ಭಾಷೆ ನನ್ನ ತ್ರಾಣ
ಪ್ರತಿ ಕ್ಷಣ ಪ್ರತಿ ದಿನ ಒಂದೇ ಧ್ಯಾನ ಮಾಡೋಣ
ಓ ತಾಯಿ ಋಣ ಭಾಷೆ ಋಣ ಒಂದೇ ಎಂದು ಸಾರೋಣ
ಯಾರೇ ಬರಲಿ ಎದುರು ನಿಲ್ಲಲಿ ಈ ನಿಲುವು ಬದಲಾಗೋಲ್ಲ
(ಕನ್ನಡಿಗ... ಓ... ಕನ್ನಡಿಗ... ಓ
ಕನ್ನಡಿಗ... ಓ... ಕನ್ನಡಿಗ... ಓ)
ಸ್ವಾಭಿಮಾನ ನಮ್ಮ ಪ್ರಾಣ ಅ ಆ ಇ ಈ ಅಭಿಮಾನ
ಭಾಷೆ ಕೊಟ್ಟ ಸ್ಥಾನ ಮಾನ ಭುವನೇಶ್ವರಿಯ ಬಹುಮಾನ
ಹಳದಿ ಕೆಂಪು ಬಾವುಟವೇ ಕನ್ನಡದ ಆಧಾರ
ನಾಡು ನುಡಿ ಹೋರಾಟಕ್ಕೆ ಅಣ್ಣಾವ್ರೇ ನೇತಾರ
ಜನರ ಒಲವು ನಮ್ಮ ಬಲವು ಈ ಗೆಲುವು ಇತಿಹಾಸ
(ಕನ್ನಡಿಗ... ಓ... ಕನ್ನಡಿಗ... ಓ
ಕನ್ನಡಿಗ... ಓ... ಕನ್ನಡಿಗ... ಓ)
Written by: Jessie Gift, S. Narayan
instagramSharePathic_arrow_out

Loading...