歌詞
ಅರೆರೇ ಶುರುವಾಯಿತು ಹೇಗೆ
ಪದವೇ ಸಿಗದಾಯಿತು ಹೇಗೆ
ಹೃದಯ ಕಳುವಾಯಿತು ಹೇಗೆ
ಒಂದೂ ಮಾತು ಆಡದೆ
ಮೊದಲೇ ಬೆಳಗಾಯಿತು ಹೇಗೆ
ಕನಸೇ ಎದುರಾಯಿತು ಹೇಗೆ
ಋತುವೇ ಬದಲಾಯಿತು ಹೇಗೆ
ಹಿಂದೇ ಮುಂದೇ ನೋಡದೆ
ಕಣ್ಣಲ್ಲೇ ನೂರು ಮಾತು
ಆಡುತ ಮುಂದೆ ಕೂತು
ಜೀವದಲಿ ಛಾಪು ಹೀಗೆ ಬೀರಿಲ್ಲ ಇನ್ಯಾರು
ಆಗಿದೆ ಜೀವ ಹೂವು
ಆದರೂ ಏನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲ ಇನ್ಯಾರು
ಆಗಿದೆ ಜೀವ ಹೂವು
ಆದರೂ ಏನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲ ಇನ್ಯಾರು
ತಂಗಾಳಿ ಬೀಸೋವಾಗ
ಎಲ್ಲೆಲ್ಲೂ ನಿಂದೇ ಮಾರ್ದನಿ
ಗುಟ್ಟಾಗಿ ಕೂಡಿಸಿಟ್ಟ
ಈ ಪ್ರೀತಿ ಒಂದೇ ಠೇವಣಿ
ನೀನಿಲ್ಲೆ ಇದ್ದರೂ ಅಂತರಂಗದಿ ಚಿತ್ರ ಮೂಡಿದೆ
ಈ ಜೀವ ನಿನ್ನನು ಸಂತೆಯಲ್ಲಿಯೂ ಪತ್ತೆಮಾಡಿದೆ
ನಾ ಹೇಗೆ ಇರಲಿ ಹೇಳು ನೀನು ಮುದ್ದು ಮಾಡದೆ
ಹೇ ಕಣ್ಣಲ್ಲೇ ನೂರು ಮಾತು
ಆಡುತ ಮುಂದೆ ಕೂತು
ಜೀವದಲಿ ಛಾಪು ಹೀಗೆ ಬೀರಿಲ್ಲ ಇನ್ಯಾರು
ಜೀವ ಹೂವು
ಏನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲ ಇನ್ಯಾರೂ
Written by: B. Ajaneesh Loknath, Jayanth Kaikini

