가사
ಗೆಳೆಯನೋ ಬಂಧುವೋ ಯಾರಿವನು
ನಗುವಲೇ ಜಗವನೇ ಮರೆಸುವನು
ಬೆನ್ನಿಗೆ ಕೂಸಿವನು
ಹೆಗಲಿಗೆ ತೇರಿವನು
ತುಂಟ ಪುಟ್ಟ ನಡಿಗೆ
ಹೂವ ಮುತ್ತು ಎದೆಗೆ
ಮರಳ ಜನನ ಮರಳಿ ಮರಳಿ ಬಂದರೂ
ನಾನೇ ಮಗುವು ಇವನೇ ನನಗೆ ತಂದೆಯು
ನಾನು ಮತ್ತು ಗುಂಡ
ನಾನು ಮತ್ತು ಗುಂಡ
ನಾನು ಮತ್ತು ಗುಂಡ
ನಾನು ಮತ್ತು ಗುಂಡ
ಬದುಕಿನ ಪಥದೀ
ನೀನೊಂದು ಸುಂದರ ಕಿನ್ನರ ಜಗವು
ಜೊತೆಯಲಿ ಇರೆ ನೀ ಏಕೀ ಜಗವೂ
ಮಾತು ನಿಂದು ತೊದಲು
ಏನೇನೋ ಅರ್ಥವು ತಿಳಿಯೆನು ನಾನು
ನಾ ಅಜ್ಞಾನಿ ನೀ ಜಾಣ
ನೀನೆ ದೊರೆ, ನೀನೆ ಧಣಿ
ಪಲ್ಲಕ್ಕಿಯ ಮೇಲೆ ಹೊತ್ತು ಮೆರೆಸುವೆನು
ಏ ನನ್ನ ಗುಂಡ, ನೀನ್ ಚಂದ್ರನ್ ತುಂಡ
ಮೋಡಗಳ ಸರಿಸಿ ಬೆಳಕನು ತಂದೆ ನೀ
ತಾಯಿ ಮಾನಸ ಕರುವೋ
ದಂಡಿಸದ ಗುರುವೋ
ನಾನು ಮತ್ತು ಗುಂಡ
ನಾನು ಮತ್ತು ಗುಂಡ
ನಾನು ಮತ್ತು ಗುಂಡ
ನಾನು ಮತ್ತು ಗುಂಡ
ಕರೆಯದೇ ಬರುವ, ಮಳೆಯು ಭೂಮಿಯ ಸೇರಿದ ಹಾಗೆ
ಸುಳಿವನು ಕೊಡದೆ ಎದೆಯೊಳಗಿಳಿದೆ
ಕಣ್ಣ ರೆಪ್ಪೆ ಬಡಿದು ನೀ ಹೇಳೋ ಕವನ ಅರಿಯೆ ನಾನು
ನಾ ಕೇಳುಗನು ನೀ ಕವಿಯು
ನೀನೆ ಇಂದ್ರ
ನೀನೆ ಸುಂದ್ರ
ದೃಷ್ಟಿ ಆಗದಂತ ದೃಷ್ಟಿ ಬೊಟ್ಟು ನಾನು
ನನ್ನ ಗುಂಡ, ನೀನ್ ಚಂದ್ರನ್ ತುಂಡ
ಕತ್ತಲನು ಸರಿಸಿ ಹರುಷವ ತಂದೆ ನೀ
ಕಂಬನಿಗೂ ನಗುವ, ನಗುವಿನಲೇ ತರುವ
ನಾನು ಮತ್ತು ಗುಂಡ
ನಾನು ಮತ್ತು ಗುಂಡ
ನಾನು ಮತ್ತು ಗುಂಡ
ನಾನು ಮತ್ತು ಗುಂಡ
Written by: Karthik Sharma, Rohith Raman