Letra
ಮನಸಿನಲ್ಲಿ ನಿರಂತರ ಸತತ ನಿನ್ನ ಚಿತ್ರೋತ್ಸವ
ಒಳಗೆ ನೂರು ನೋವಿದ್ದರು ಹೊರಗೆ ನಿತ್ಯ ದೀಪೋತ್ಸವ
ನೀ ನಡೆದಂಥ ದಾರಿಯೇ ಈ ನಮಗೊಂದು ಪ್ರೇರಣೆ
ಮರೆಯಲಾಗದ ಮೀನುಗುತಾರೆಯೇ ನಿನಗೆ ಸಾವಿರ ವಂದನೆ
ಮನಸಿನಲ್ಲಿ ನಿರಂತರ ಸತತ ನಿನ್ನ ಚಿತ್ರೋತ್ಸವ
ಒಳಗೆ ನೂರು ನೋವಿದ್ದರು ಹೊರಗೆ ನಿತ್ಯ ದೀಪೋತ್ಸವ
ನೀ ನಡೆದಂಥ ದಾರಿಯೇ ಈ ನಮಗೊಂದು ಪ್ರೇರಣೆ
ಮರೆಯಲಾಗದ ಮೀನುಗುತಾರೆಯೇ ನಿನಗೆ ಸಾವಿರ ವಂದನೆ
ನೂರಾರು ಕುತೂಹಲ ನಿನ್ನಲ್ಲಿ ಪ್ರತಿಕ್ಷಣ
ಈ ಬಾಳಲ್ಲಿ ಕೂಡ ನೀನಾಯ್ದ ಪಾತ್ರ ತುಂಬಾ ವಿನೂತನ
ಆಗಾಗ ವಿದಾಯದ ಆತಂಕ ಸತಾಯಿಸಿ
ನೀ ಏಕಾಂಗಿಯಾಗಿ ಹೊರಡುವಾಗ ಚೂರಾಯಿತೆ ಮನ
ನೀ ವಹಿಸಿದ್ದ ಪಾತ್ರದಿ ನೀ ಮರೆತಿದ್ದೆ ನಿನ್ನನೀ
ಕನಸಿನೂರಲಿ ಮರೆತ ದಾರಿಯೇ ನಿನಗೆ ಸಾವಿರ ವಂದನೆ
ಮನಸಿನಲ್ಲಿ ನಿರಂತರ ಸತತ ನಿನ್ನ ಚಿತ್ರೋತ್ಸವ
ಒಳಗೆ ನೂರು ನೋವಿದ್ದರು ಹೊರಗೆ ನಿತ್ಯ ದೀಪೋತ್ಸವ
ಒಮ್ಮೊಮ್ಮೆ ಎಳೆಮಗೂ ಇನ್ನೊಮ್ಮೆ ವಿಲಾಸಿನಿ
ಈ ಸಂತೇಲಿ ಕೂಡ ಎಂದೆಂದೂ ನೀನು ಏಕಾಂತ ವಾಸಿನಿ
ಹೀಗೊಮ್ಮೆ ಬರಿ ಹಠ, ಆಗೊಮ್ಮೆ ಮೇಲು ದನಿ
ಈ ಆಟನ ಇಲ್ಲಿ ಅರ್ಧಕ್ಕೆ ಬಿಟ್ಟು ಇನ್ನೆಲ್ಲಿ ಹೋದೆ ನೀ
ನೀ ಬಂಡೆದ್ದ ರೀತಿಯೇ ಮಹಾ ಬಲುದೊಡ್ಡ ಸಾಧನೆ
ಪರದೆ ಬಿಚ್ಚಲು ಉರಿವ ದೀಪವೇ ನಿನಗೆ ಸಾವಿರ ವಂದನೆ
ಮನಸಿನಲ್ಲಿ ನಿರಂತರ ಸತತ ನಿನ್ನ ಚಿತ್ರೋತ್ಸವ
ಒಳಗೆ ನೂರು ನೋವಿದ್ದರು ಹೊರಗೆ ನಿತ್ಯ ದೀಪೋತ್ಸವ
Written by: Jayanth Kaikini, Manomurthy