Créditos
PERFORMING ARTISTS
Y.K. Muddukrishna
Keyboards
COMPOSITION & LYRICS
Na Damodara Shetty
Songwriter
Y.K. Muddukrishna
Songwriter
PRODUCTION & ENGINEERING
Chengappa AD
Co-Producer
Letra
ಸಾಗರದ ಸಂಚಯಿತ ನೀಲ ನೀರು
ಗಟ್ಟಿಗೊಂಡಾಗೊಮ್ಮೆ ಮುಟ್ಟಿನೋಡು.
ಕೊರೆವ ಚಳಿಯಲು ಅದರ ಶಿಲ್ಪವೈಭವಕೆ
ಬೇಲೂರು ಬಾಲಿಕೆಯು ನಾಚಿ ನೀರು.
ಕರಗಬಲ್ಲಳೆ ಬಾಲೆ? ಕರಗುವರು ನೋಟಕರು
ನಿರತ ಕರೆಯುವಳಾಕೆ ನೋಡುತಿರು ನನ್ನ
ಅಂತಲ್ಲ ಸಾಗರದ ಸಂಚಯಿತ ನೀರು
ಗಟ್ಟಿಗೊಂಡರೆ ಒಮ್ಮೆ ಶಿಲೆಯೆ ತಾನು
ಮರುಗಳಿಗೆ ಕರಗುವಳು ನೆರೆಯ ದುಃಖವ ಕಂಡು
ಮೃದು ಕಠಿಣ ಬದುಕಿನಾ ತಾಳಮೇಳ
ʻʻವಜ್ರಾದಪಿ ಕಠೋರಾನಿ
ಮೃದೂನಿ ಕುಸುಮಾದಪಿʼʼ
ಆತ್ಮವಿಲ್ಲದ ಶಿಲ್ಪ ಕರಗಬಲ್ಲುದೆ ಹೇಳು
ಮುದ್ದು ಮಕ್ಕಳ ಮುಗ್ಧ ಮನಸಿನಂತೆ
ನಿತ್ಯನೂತನವೆಂಬ ಏಕತಾನತೆ ಮರೆತು
ಬೇಲೂರ ಬಾಲಿಕೆಯ ಜಡಲಾಸ್ಯ ಮರೆತು
ಸಾಗರದ ನಿಶ್ಚಲಿತ ನೀಲ ನೀರಾಗೊಮ್ಮೆ
ಕರಗು ಕಣ್ಣೀರಾಗು, ಮರುನಿಮಿಷ ಮಾಗು |ಸಾಗರದ ಸಂಚಯಿತ|
Written by: Na Damodara Shetty, Y.K. Muddukrishna

