В составе

Слова

ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯದ ಸಾರವಿದು
ಹಾಡಿದರೆ ಮರೆಯದ ಹಾಡು ಇದು
ಪ್ರೇಮ ಬರಹ
ಪ್ರೇಮಾ, ದಿನ ನೂತನವೀ ಪ್ರೇಮ
ಪ್ರತೀ ಜನುಮದಲೂ ಪ್ರತೀ ನಿಮಿಷದಲೂ
ಜೊತೆ ಇರುವುದೇ ಪ್ರೇಮಾ
ದಿನ ನಗುವುದೇ ಪ್ರೇಮ
ಯಾರೋ ನೀನ್ಯಾರು
ಯಾರೋ ನಾನ್ಯಾರು
ನಾವೀಗ ಸೇರಿರಲೂ ಪ್ರೇಮದ ಸೆಳೆತವೇ ಕಾರಣವು
ಸಾವೇ ಹೂವಾಗಿ
ನೋವೇ ಜೇನಾಗಿ
ನಾವೀಗ ಸವಿದಿರಲು ಪ್ರೇಮದ ಸತ್ಯವೇ ಪ್ರೇರಣವು
ಪ್ರೀತಿ ಮಾಡುವವರು ಲೋಕದಲಿ ಪುಣ್ಯ ಮಾಡಿದವರು
ಪ್ರೇಮಾ ಬಲು ಸುಖಮಯವೀ ಪ್ರೇಮಾ
ಈ ಭೂಮಿಯಲಿ ಈ ಬಾಳಿನಲಿ ನೆನಪಿರುವುದೇ ಪ್ರೇಮಾ
ಹೆಸರುಳಿವುದೇ ಪ್ರೇಮಾ
ಪ್ರೇಮ ಬರಹ
ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯದ ಸಾರವಿದು
ಹಾಡಿದರೆ ಮರೆಯದ ಹಾಡು ಇದು
ನಾನೇ ನಿನಾದೆ
ನೀನೇ ನನಾದೆ
ಬೇರಾಗೋ ಸುಳ್ಳುಗಳ ಪ್ರೇಮದ ಬಾಣವು ಓಡಿಸಿದೆ
ಆಸೆ ಮುಗಿಲಾಯ್ತು
ರಾತ್ರಿ ಹಗಲಾಯ್ತು
ದೂರಾಗೋ ಚಿಂತೆಗಳ ಪ್ರೇಮದ ಹಾಸಿಗೆ ಮರೆಸುತ್ತಿದೆ
ಪ್ರೀತಿ ಮಾಡಿದವರು ಯಾವುದೇ ನಶೆಯ ಬಲೆಗೆ ಸಿಗರು
ಪ್ರೇಮಾ ಬಲು ನಶೆಮಯವೀ ಈ ಪ್ರೇಮ
ಪ್ರತೀ ಘಳಿಗೆಯಲೂ ಕಣ ಕಣಗಳಲೂ ಬಲ ಕೊಡುವುದೇ ಪ್ರೇಮ
ಸುಖ ಕೊಡುವುದೇ ಪ್ರೇಮ
ಪ್ರೇಮ ಬರಹ
ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯದ ಸಾರವಿದು
ಹಾಡಿದರೆ ಮರೆಯದ ಹಾಡು ಇದು
Written by: Hamsalekha
instagramSharePathic_arrow_out