Lyrics
ನಿನ್ನೆದುರಲಿ ನಾನು
ನನ್ನೆದುರಲಿ ನೀನು
ಜೊತೆ ಜೊತೆಯಲಿ ಹೀಗೆ ಇರುವೆ ಜೊತೆಗೆ
ನೀ ಪ್ರಾಣವು ನನಗೆ
ಈ ಪ್ರಾಣವು ನಿನಗೆ
ಉಸಿರಾಗಿರು ಹೀಗೆ, ಉಸಿರ ಜೊತೆಗೆ
ಜಗದ ಸುಖವೆಲ್ಲವೂ ಇರಲಿ ಈ ಕೈಯಲ್ಲಿ
ಇರುವವರೆಗೂ ಕೊನೆಯವರೆಗೂ
ನಿನ ತೋಳಲಿ ಹೀಗೆ ಮಗು ಮಲಗಿರೋ ಹಾಗೆ
ಉಳಿದಿರುವೆನು ನಾನು ಎಂದೂ ಹೀಗೆ
ಹೊಸ ಉಡುಗೊರೆ ಒಂದು ಸಿಕ್ಕಂತಿದೆ ನನಗೆ
ಬೆಲೆ ಕಟ್ಟದ ಪ್ರೀತಿ ಇರಲಿ ಹೀಗೆ
Written by: A.P. Arjun, Arjun Janya