Credits
PERFORMING ARTISTS
Sonu Nigam
Lead Vocals
R.N.Jayagopal
Performer
Koti
Music Director
COMPOSITION & LYRICS
R.N.Jayagopal
Songwriter
Koti
Composer
PRODUCTION & ENGINEERING
P. Dhanraj
Producer
Lyrics
ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ, ವೇಷ ಬಿಚ್ಚಿ ಹೋಗಲು ದೂರಾಗಿ
ಹೋಗಬೇಕು ಬಂದೋರೆಲ್ಲ, ನಿರಂತರ ನಿಂತೋರಿಲ್ಲ
ಹೋದೋರು ಎಂದೂ ಪುಣ್ಯವಂತರು
ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ ಹೋಗಲೆಂದು
ಚಿಂತೆ ಬಿಡು
ಎಂದೂ ಮುಂದೆ ನೋಡು
ಇರುಳಾದ ನಂತರ, ಮತ್ತೆ ಸೂರ್ಯೋದಯವಿದೆ
ಶೃತಿ ತಪ್ಪಿ
ಹಾಡು ನಿಂತ ವೇಳೆ
ಹೊಸ ತಂತಿನಾದದೆ, ನವ ಗಾನಾಮೃತವಿದೆ
ನೆನಪೆಂಬ ಹೂವು ಬಾಳಿನಲ್ಲಿ ಕಂಪು ಸೂಸಲಿ
ನಂಬಿಕೆಯ ಕಿರಣವು, ಮನದಲಿ ಮೂಡಲಿ
ಎಲ್ಲೋ ಯಾರೋ ಹೇಗೋ ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ ಹೋಗಲೆಂದು
ಮೇಲೆ ನಿಂತ
ಒಬ್ಬ ಸೂತ್ರಧಾರ
ಚದುರಂಗ ಆಡುವ, ನೋಡು ನಮ್ಮ ಬಾಳಲ್ಲೂ
ಏನಾಗಲಿ
ಧೈರ್ಯ ನಮ್ಮಲ್ಲಿರೆ
ಬಿರುಗಾಳಿ ಬೀಸಲಿ, ನೌಕೆ ದಾರಿ ತಪ್ಪದೆಂದು
ಈ ಕಣ್ಣ ನೀರು ನನ್ನ ಮನದೆ ರಕ್ತ ಸುರಿಸಿದೆ
ನನ್ನೆದೆಯ ದುಃಖವನು, ಯಾರಲ್ಲಿ ಹೇಳಲಿ
ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ, ವೇಷ ಬಿಚ್ಚಿ ಹೋಗಲು ದೂರಾಗಿ
ಹೋಗಬೇಕು ಬಂದೋರೆಲ್ಲ, ನಿರಂತರ ನಿಂತೋರಿಲ್ಲ
ಹೋದೋರು ಎಂದೂ ಪುಣ್ಯವಂತರು
ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ ಹೋಗಲೆಂದು
Written by: Koti, R.N.Jayagopal, S R Koteswara Rao