Şarkı sözleri
ನಿನಗೋಸ್ಕರ ನಾ ಕಾದಿರುವೆ
ನೀ ಎಲ್ಲಿರುವೆ ನೀ ಎಲ್ಲಿರುವೆ
ನಿನಗೋಸ್ಕರ ನಾ ಕಾದಿರುವೆ
ನೀ ಎಲ್ಲಿರುವೆ ನೀ ಎಲ್ಲಿರುವೆ
ನಾ ನಿನಗೆ ಅವತ್ತೇ ಹೇಳಿದೆ ನನ್ನ ಮಾತು ಕೇಳದೆ ಯಾಕೆ ಹೀಗೆ ಮಾಡಿದೆ
ನನ್ನ ಜೊತೆ ಇದ್ದಾಗ ಚೆನ್ನಾಗೆ ಇದ್ದೆ
ಬೇರೆ ಹೋಗಿ ಕೆಟ್ಟು ಅರ್ಧ ದಾರಿಲಿ ಬಿಟ್ಹೋದೆ
ನಿನ್ನ ಜೊತೆ ಕಳೆದ ಕ್ಷಣಗಳು ಕಾಡುತ್ತಿದೆ ಮನಸ್ಸಿನ ನೋವು ಕಣ್ಣೀರಾಗಿ ಹೊರ ಬಂದಿದೆ
ಬಂದುಬಿಡೆ ಬಂದುಬಿಡೆ ಆಗುತ್ತಿಲ್ಲ ಸಹಿಸಲು ನನ್ನ ಕೈಯಲ್ಲಿ
ನಿನ್ನ ಕರೆ ಓ ನಿನ್ನ ಕರೆ ಗುಣುಗುಟ್ಟುತಿದೆ ನನ್ನ ಕಿವಿಯಲ್ಲಿ
ಕೇಳಿದೆ ಕೇಳಿದೆ ದೇವರಲ್ಲಿ ಪ್ರಾರ್ಥನೆ ಒಂದಿದೆ
ದೇವರೇ ಒಂದು ಬಾರಿ ಕಣ್ತೆರೆದು ನೋಡು
ಬಂತಾದರೂ ಹೇಗೆ ಮನಸ್ಸು ತೆಗೆದುಕೊಂಡೆ ಆಕೆ ಕೂಡಿಟ್ಟ ನೂರಾರು ಕನಸು
ಸಾಧ್ಯವಾದಷ್ಟು ಬೇಗ ಆಕೆಯನ್ನು ಭೂಮಿಗೆ ಕಳುಹಿಸು
ನಿನಗೋಸ್ಕರ ನಾ ಕಾದಿರುವೆ......
ನೀ ಎಲ್ಲಿರುವೆ ನೀ ಎಲ್ಲಿರುವೆ......
ನಿನಗೋಸ್ಕರ ನಾ ಕಾದಿರುವೆ…...
ನೀ ಎಲ್ಲಿರುವೆ ನೀ ಎಲ್ಲಿರುವೆ......
ಗೆಳತಿ ತರ ನೀನಿದ್ದೆ ನನ್ನ ಜೊತೆ
ಆಕಾಶ ನೋಡಿದಾಗ ನಕ್ಷತ್ರ ಮಿನುಗುತ್ತಿದ್ದರೆ ತಿಳಿಯುವೆ ಅದು ನೀ ಎಂದೇ
ನಿನ್ನ ಬಿಂಬವೂ ನನ್ನ ಮೇಲೆ ವಾಲಿದೆ
ನನ್ನ ಮನ ಕಣದಲ್ಲಿ ನಿನ್ನ ನೆನಪೆ ನೆಲೆಯಾಗಿದೆ
ಏನು ತಿಳಿಯದ ಮುಗ್ಧ ಮನಸ್ಸು
ಅವಳದು
ನಿನ್ನತ್ರ ನನ್ನ Request ಒಂದೇ ತಂದೆ
ಇರು ಯಾವಾಗಲೂ ಅವಳ ಹಿಂದೆ
ಅರ್ಥವಾಗಲಿಲ್ಲ ಇಷ್ಟು ಬೇಗ ಯಾಕೆ ತೆಗೆದುಕೊಂಡೆ
ಮೊದಲನೇ ಬಾರಿ ಕೋಪ ಬರುತಿದೆ
ಏನು ಮಾಡಲು ತೋಚದೆ ಅರ್ಧ ಜೀವವಾಗಿದೆ
ನನಗೆ ಬೇರೇನು ಬೇಡ ಅವಳ ಜೊತೆಗಿದ್ದು ಅವಳನ್ನು ಅರಸಿ ಹಾರೈಸು ತಂದೆ
ನಿನಗೋಸ್ಕರ ನಾ ಕಾದಿರುವೆ......
ನೀ ಎಲ್ಲಿರುವೆ ನೀ ಎಲ್ಲಿರುವೆ......
ನಿನಗೋಸ್ಕರ ನಾ ಕಾದಿರುವೆ…...
ನೀ ಎಲ್ಲಿರುವೆ ನೀ ಎಲ್ಲಿರುವೆ......
Written by: Crazy CL, J.K JEEVAN