Müzik Videosu

Müzik Videosu

Şarkı sözleri

ಮೌನ
ಮೌನ
ಮೌನ ತಬ್ಬಿತು ನೆಲವ
ಝುಮ್ಮೆನೆ ಪುಳಕಗೊಂಡಿತು ಧಾರಿಣಿ
ಮೌನ ತಬ್ಬಿತು ನೆಲವ
ಝುಮ್ಮೆನೆ ಪುಳಕಗೊಂಡಿತು ಧಾರಿಣಿ
ನೋಡಿ ನಾಚಿತು ಬಾನು
ಸೇರಿತು ಕೆಂಪು ಸಂಜೆಯ ಕದಪಲಿ
ಮೌನ ತಬ್ಬಿತು ನೆಲವ
ಝುಮ್ಮೆನೆ ಪುಳಕಗೊಂಡಿತು ಧಾರಿಣಿ
ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೇ ಸಡಿಲಿತು
ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೇ ಸಡಿಲಿತು
ಬೆಚ್ಚ ಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು
ಬೆಚ್ಚ ಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು
ಮೌನ
ಮೌನ
ಮೌನ ತಬ್ಬಿತು ನೆಲವ
ಝುಮ್ಮೆನೆ ಪುಳಕಗೊಂಡಿತು ಧಾರಿಣಿ
ಇರುಳ ಸೆರಗಿನ ನೆಳಲು ಚಾಚಿತು
ಬಾನು ತೆರೆಯಿತು ಕಣ್ಣನು
ಇರುಳ ಸೆರಗಿನ ನೆಳಲು ಚಾಚಿತು
ಬಾನು ತೆರೆಯಿತು ಕಣ್ಣನು
ನೆಲವು ತಣಿಯಿತು, ಬೆವರು ಹನಿಯಿತು
ಭಾಷ್ಪ ನೆನೆಸಿತು ಹುಲ್ಲನು
ನೆಲವು ತಣಿಯಿತು, ಬೆವರು ಹನಿಯಿತು
ಭಾಷ್ಪ ನೆನೆಸಿತು ಹುಲ್ಲನು
ಮೌನ
ಮೌನ
ಮೌನ ತಬ್ಬಿತು ನೆಲವ
ಝುಮ್ಮೆನೆ ಪುಳಕಗೊಂಡಿತು ಧಾರಿಣಿ
ಮೌನ ಉರುಳಿತು, ಹೊರಳಿತೆದ್ದಿತು
ಗಾಳಿ ಭೋರನೆ ಬೀಸಿತು
ಮೌನ ಉರುಳಿತು, ಹೊರಳಿತೆದ್ದಿತು
ಗಾಳಿ ಭೋರನೆ ಬೀಸಿತು
ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು
ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು
ಹಾಯೆಂದು ಮೌನವು ಮಲಗಿತು
ಹಾಯೆಂದು ಮೌನವು ಮಲಗಿತು
Written by: C Ashwath, M. Gopalakrishna Adiga
instagramSharePathic_arrow_out

Loading...