Music Video
Music Video
Credits
PERFORMING ARTISTS
Udit Narayan
Lead Vocals
Trivendram Sisters - Latha Malathi
Lead Vocals
V. Ravichandran
Music Director
COMPOSITION & LYRICS
V. Ravichandran
Songwriter
PRODUCTION & ENGINEERING
V. Ravichandran
Producer
Lyrics
ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ,
ಥೈ ಥೈ ಥೈ ಥೈ ಬಂಗಾರಿ, ಅಲೆಲೆಲೇ, ಸೈ ಸೈ ಸೈ ಎನ್ನು ಸಿಂಗಾರಿ,
ಬೆಟ್ಟಾದ ಮೇಲಿಂದ ಓಡೋಡಿ ಬಂದಂಥ ಕಾವೇರಿ... ವೈಯಾರಿ,
ಹಾಡಿ ನಲಿ ನಲಿ ಮಯೂರಿ, ಹಾಡಿ ನಲಿ ನಲಿ ಮಯೂರಿ
ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ, ಆಹಾಹಹಾ
ಥೈ ಥೈ ಥೈ ಥೈ ಬಂಗಾರಿ ಓಹೋ ...
ಕಾನನದಾ ದೇವತೆಯಂತೆ ಬಂದಿರುವೆ ಎದುರಲ್ಲಿ,
ಜೇನಾಗಿ ನೀ ತುಂಬಿರುವೆ ನನ್ನೆದೆಯಾ ಹೂವಲ್ಲಿ,
ಮೀನಾಗಿ ಹಾಡುತಲಿರುವೆ ಮನಸೆಂಬ ಮಡುವಲ್ಲಿ,
ಮಿಂಚಾಗಿ ಹರಿದಾಡಿರುವೆ ಈ ನನ್ನಾ ಮೈಯಲ್ಲಿ, ಈ ನನ್ನಾ ಮೈಯಲ್ಲಿ,
ಆಹಾ! ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ, ಅಲೆಲೆಲೇ
ಥೈ ಥೈ ಥೈ ಥೈ ಬಂಗಾರಿ
ಹಾರಾಡೋ ಹಕ್ಕಿಗಳಲ್ಲಿ, ಅರಗಿಳಿಯೇ ಅಂದವು,
ನಾ ಕಂಡ ಹೆಣ್ಣುಗಳಲ್ಲಿ, ಚೆಲುವೆ ನೀ ಚಂದವು,
ಆ ಆ ಆ ಆ ಆಹ ಆಹ ಆಹ ಓ ಹೋಯ್
ಮುಳ್ಳೆಲ್ಲ ಹೂವಿನ ಹಾಗೆ, ನಿನ್ನೊಡನೆ ಬರುವಾಗ,
ಉರಿ ಬಿಸಿಲು ಹುಣ್ಣಿಮೆಯಂತೆ ಹೆಣ್ಣೇ ನೀ ನಗುವಾಗ, ಹೆಣ್ಣೇ ನೀ ನಗುವಾಗ,
ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ,
ಥೈ ಥೈ ಥೈ ಥೈ ಬಂಗಾರಿ, ಅಲೆಲೆಲೇ, ಸೈ ಸೈ ಸೈ ಎನ್ನು ಸಿಂಗಾರಿ,
ಬೆಟ್ಟಾದ ಮೇಲಿಂದ ಓಡೋಡಿ ಬಂದಂಥ ಕಾವೇರಿ... ವೈಯಾರಿ,
ಹಾಡಿ ನಲಿ ನಲಿ ಮಯೂರಿ, ಹಾಡಿ ನಲಿ ನಲಿ ಮಯೂರಿ
ಜಿಗಿದಾಡೋ ಜಿಂಕೆಗಳಂತೆ ಕಾಡೆಲ್ಲಾ ಓಡುವಾ,
ನಲಿದಾಡೋ ಚಿಟ್ಟೆಗಳಂತೆ ವನವೆಲ್ಲಾ ನೋಡುವಾ,
ಹರಿದಾಡೋ ನದಿಯಂತಾಗಿ ಗಿರಿಯಿಂದಾ ಜಾರುವಾ,
ಕಡಲನ್ನು ಕೂಡುವ ಹಾಗೆ ಒಂದಾಗಿ ಸೇರುವಾ, ಒಂದಾಗಿ ಸೇರುವಾ
ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ,
ಥೈ ಥೈ ಥೈ ಥೈ ಬಂಗಾರಿ, ಅಲೆಲೆಲೇ, ಸೈ ಸೈ ಸೈ ಎನ್ನು ಸಿಂಗಾರಿ,
ಬೆಟ್ಟಾದ ಮೇಲಿಂದ ಓಡೋಡಿ ಬಂದಂಥ ಕಾವೇರಿ... ವೈಯಾರಿ,
ಹಾಡಿ ನಲಿ ನಲಿ ಮಯೂರಿ, ಹಾಡಿ ನಲಿ ನಲಿ ಮಯೂರಿ
ಹಾಡಿ ನಲಿ ನಲಿ ಮಯೂರಿ, ಹಾಡಿ ನಲಿ ನಲಿ ಮಯೂರಿ
ಹಾಡಿ ನಲಿ ನಲಿ ಮಯೂರಿ, ಹಾಡಿ ನಲಿ ನಲಿ ಮಯೂರಿ
Written by: V. Ravichandran