Music Video

Music Video

Credits

PERFORMING ARTISTS
S.P. Balasubrahmanyam
S.P. Balasubrahmanyam
Performer
B.R. Chaaya
B.R. Chaaya
Performer
COMPOSITION & LYRICS
Hamsalekha
Hamsalekha
Composer

Lyrics

ಏಕೆ ಹೀಗಾಯ್ತೋ ನಾನು ಕಾಣೆನೋ
ಪ್ರೀತಿ ಮನದಲ್ಲಿ ಹೇಗೆ ಮೂಡಿತೋ
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ
ಏಕೆ ಹೀಗಾಯ್ತೋ ನಾನು ಕಾಣೆನೋ
ಪ್ರೀತಿ ಮನದಲ್ಲಿ ಹೇಗೆ ಮೂಡಿತೋ
ಆ ನೋಟದಲಿ
ಅದು ಏನಿದೆಯೋ
ತುಟಿ ಅಂಚಿನಲಿ
ಸವಿ ಜೇನಿದೆಯೋ
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ
ನೀ ನಗುವಾಗ
ಜರತಾರಿ ಹೊಸ ಸೀರೆ ಉಟ್ಟು ಬಳುಕಾಡಿ ಬಂದೆ
ನೀ ನುಡಿದಾಗ
ಮೊಳದುದ್ದ ಜಡೆ ತುಂಬ ಮಲ್ಲೆ ಮುಡಿದೆನ್ನ ಸೆಳೆದೆ
ಉಸಿರಾಟ ಮರೆತು ಹೋಯಿತು
ಬೇರೆನೂ ಕಾಣದಾಯಿತು
ನಿನ್ನಲ್ಲಿ ನನ್ನ ಈ ಜೀವ ಸೇರಿತು
ಏಕೆ ಹೀಗಾಯ್ತೋ ನಾನು ಕಾಣೆನೋ
ಪ್ರೀತಿ ಮನದಲ್ಲಿ ಹೇಗೆ ಮೂಡಿತೋ
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಈ ಹೊಸದಾದ
ಆನಂದ ತಂದಂಥ ಮತ್ತಿನ ಮುತ್ತನ್ನ ತಂದೆ
ಆ ನೆನಪಲ್ಲೇ
ಹೊಸದಾದ ಅನುರಾಗ ನನ್ನ ಎದೆಯಲ್ಲಿ ತಂದೆ
ಈ ನಾಡಿ ನಿಂತು ಹೋಯಿತು
ನಾ ಯಾರೋ ಮರೆತು ಹೋಯಿತು
ನಿನ್ನಲ್ಲಿ ನನ್ನ ಈ ಜೀವ ಸೇರಿತು
ಏಕೆ ಹೀಗಾಯ್ತೋ ನಾನು ಕಾಣೆನೋ
ಪ್ರೀತಿ ಮನದಲ್ಲಿ ಹೇಗೆ ಮೂಡಿತೋ
ಆ ನೋಟದಲಿ
ಅದು ಏನಿದೆಯೋ
ತುಟಿ ಅಂಚಿನಲಿ
ಸವಿ ಜೇನಿದೆಯೋ
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಸೇರಿದೆ ನನ್ನ ಈ ಮನ
Written by: Hamsalekha
instagramSharePathic_arrow_out

Loading...