Credits
PERFORMING ARTISTS
Shankar Mahadevan
Lead Vocals
Hamsalekha
Performer
Chakri
Music Director
COMPOSITION & LYRICS
Hamsalekha
Songwriter
Chakri
Composer
PRODUCTION & ENGINEERING
Vallabha
Producer
Lyrics
ಜೀವ ಕನ್ನಡ, ದೇಹ ಕನ್ನಡ, ಬಾಳು ಕನ್ನಡ ನನದೆಂದೋನೆ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ ಸಹಿಸೋನ್ ನೀನಲ್ಲ
ಕೆಂಪು, ಹಳದಿ ಬಾವುಟಕ್ಕೆ ನೀನೆ ತಾನೇ ಬಾಹುದಂಡ
ನಿನ್ನ ಯುದ್ಧ ಸತ್ಯ-ಶುದ್ಧ, ನಡೆ, ನಡೆ, ಸೋಲಿಲ್ಲ
ನಮಗಾಗಿ ಹುಟ್ಟಿದೆ ನೀನು, ಕಾಪಾಡೋ ಕಾಮಧೇನು, ಜ್ವಾಲಾಮುಖಿ ವೈರಿಯೇ
ಹೇ, ಧೀರ, ಹೇ, ವೀರ, ಎದುರಾರೋ ನಿನಗೆ?
ಮನೆ ದೀಪ, ಮನೆ ಬೇಲಿ ನೀನಾದೆ ನಮಗೆ
ನಾಡು, ಕರುನಾಡು ಎಲ್ಲ ನಿನ್ನದು
ನೀ ತಂದ ವಿಜಯ ಸದಾ ನಮ್ಮದು
ಜೀವ ಕನ್ನಡ, ದೇಹ ಕನ್ನಡ, ಬಾಳು ಕನ್ನಡ ನನದೆಂದೋನೆ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ ಸಹಿಸೋನ್ ನೀನಲ್ಲ
ಅಭಿಮಾನವೇ ನಿನ್ನ ಉಸಿರಾಟವು
ಕರುಣೆ, ದಯೆ ನಿನ್ನ ಸಂಸ್ಕಾರವು
ನಿನ್ನ ಬೆನ್ನ ಹಿಂದೆ ಜನಸಾಗರ
ನೀನವರ ಎದೆಯಲ್ಲಿ ಅಜರಾಮರ
ಬಿಚ್ಚಿದ ಈ ಕತ್ತಿಗೆ ಹೊಣೆಯಂತೆ ನಾವು ಎಂದೂ
ನಮ್ಮ ಈ ನರನಾಡಿಗೆ ನೀನಾದೆ ಸ್ಪೂರ್ತಿಬಿಂದು
ಸಿಂಹಕೆ ತಲೆ ಬಗ್ಗದು, ಕದನಕೆ ಎದೆ ಜಗ್ಗದು
ನುಗ್ಗು, ನುಗ್ಗು, ಮುನ್ನುಗ್ಗು, ನೀ ನಡೆದುದೇ ದಾರಿ
ಕನ್ನಡದ ಕಟ್ಟಾಳು ಸಿಡಿದೆದ್ದರೆ
ಕಲಿಗೂನೂ ಕೆಡಬಹುದು ಕಡು ನಿದ್ದಿರೆ
ಜೀವ ಕನ್ನಡ, ದೇಹ ಕನ್ನಡ, ಬಾಳು ಕನ್ನಡ ನನದೆಂದೋನೆ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ ಸಹಿಸೋನ್ ನೀನಲ್ಲ
ನಾವಿದ್ದ ಕಡೆಯಲ್ಲಿ ಜಗಳ ಇಲ್ಲ
ಪರನಿಂದೆ, ಪರಹಿಂಸೆ ಬೇಕಾಗಿಲ್ಲ
ದೌರ್ಜನ್ಯ, ದರ್ಪಕ್ಕೆ ತುತ್ತಾದೆವು
ನಿನ್ನಿಂದ ಕೈ ಹಿಡಿಯ ತುತ್ತಾದೆವು
ಕತ್ತಲು ಕವಿದಾಗಲೇ ನೀ ಸೂರ್ಯನಾಗಿ ಬಂದೆ
ಮುಳುಗುವ ಜನದೋಣಿಗೆ ಹುಟ್ಟನ್ನು ಹುಡುಕಿ ತಂದೆ
ಕಣ್ಣಿನ ನೀರೊರೆಸಿದೆ, ಬಾಳಿಗೆ ನಗು ತರಿಸಿದೆ
ಕಾಣದ ಈ ಊರಲಿ ಕನ್ನಡದ ಬಂಧುವಾದೆ
ನಾಡು, ಕರುನಾಡು ಎಲ್ಲ ನಿನ್ನದು
ನೀ ತಂದ ವಿಜಯ ಸದಾ ನಮ್ಮದು
ಜೀವ ಕನ್ನಡ, ದೇಹ ಕನ್ನಡ, ಬಾಳು ಕನ್ನಡ ನನದೆಂದೋನೆ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ ಸಹಿಸೋನ್ ನೀನಲ್ಲ
ಕೆಂಪು, ಹಳದಿ ಬಾವುಟಕ್ಕೆ ನೀನೆ ತಾನೇ ಬಾಹುದಂಡ
ನಿನ್ನ ಯುದ್ಧ ಸತ್ಯ-ಶುದ್ಧ, ನಡೆ, ನಡೆ, ಸೋಲಿಲ್ಲ
ನಮಗಾಗಿ ಹುಟ್ಟಿದೆ ನೀನು, ಕಾಪಾಡೋ ಕಾಮಧೇನು, ಜ್ವಾಲಾಮುಖಿ ವೈರಿಯೇ
ಹೇ, ಧೀರ, ಹೇ, ವೀರ, ಎದುರಾರೋ ನಿನಗೆ?
ಮನೆ ದೀಪ, ಮನೆ ಬೇಲಿ ನೀನಾದೆ ನಮಗೆ
ನಾಡು, ಕರುನಾಡು ಎಲ್ಲ ನಿನ್ನದು
ನೀ ತಂದ ವಿಜಯ ಸದಾ ನಮ್ಮದು
ಜೀವ ಕನ್ನಡ, ದೇಹ ಕನ್ನಡ, ಬಾಳು ಕನ್ನಡ ನನದೆಂದೋನೆ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ ಸಹಿಸೋನ್ ನೀನಲ್ಲ
Written by: Chakri, Gilla Chakradhar, Hamsalekha