Music Video

Music Video

Credits

PERFORMING ARTISTS
S.P. Balasubrahmanyam
S.P. Balasubrahmanyam
Lead Vocals
COMPOSITION & LYRICS
Vijaya Bhaskar
Vijaya Bhaskar
Composer
Chi. Udayashankar
Chi. Udayashankar
Songwriter

Lyrics

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ಈ ಅಂಜದ ಎದೆಯಲಿ ನಂಜೇ ಇಲ್ಲ
ಬಗ್ಗುವ ಆಳಲ್ಲಾ, ತಲೆ ತಗ್ಗಿಸಿ ಬಾಳೋಲ್ಲ
ಆ ಲಂಕೆಯ ಸುಟ್ಟ ಬೆಂಕಿ ಯಾವ ಕೇಡನು ಮಾಡಿಲ್ಲಾ
ಆದರೆ ಸೇಡನು ಬಿಡಲಿಲ್ಲಾ
ಅಭಿಮಾನವ ಬಿಡಲೊಲ್ಲೇ, ಅಪಮಾನವ ಸಹಿಸೊಲ್ಲೇ
ಅನ್ಯಾಯವ ಮಾಡೋಲ್ಲೇ
ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ಆ ದೇವರನೆಂದಿಗು ದೂರೋದಿಲ್ಲ, ನಂಬಿಕೆ ನೀಗೋಲ್ಲ
ನಾ ದಾರಿ ತಪ್ಪೊಲ್ಲಾ
ನಾ ಇಟ್ಟರೇ ಶಾಪ, ಕೊಟ್ಟರೇ ವರ ನೀತಿಯ ಮೀರೋಲ್ಲ
ನಾ ಒಲಿದರೆ ಕೇಡಿಲ್ಲಾ
ಆಕ್ರೋಶದ ಉರಿ ನಾನು, ಆವೇಗದ ವಶ ನಾನು
ಆ ಪ್ರೇಮಕೆ ಒಲಿದೇನು
ಹಾವಿನ ದ್ವೇಷ ಹನ್ನೆರಡು ವರುಷ
ಆ ರಾಮನು ಇಟ್ಟ ಬಾಣದ ಗುರಿಯು ಎಂದು ತಪ್ಪಿಲ್ಲಾ
ಎಂದೆಂದೂ ತಪ್ಪಿಲ್ಲಾ
ಈ ರಾಮಾಚಾರಿನ್ ಕೆಣಕೋ ಗಂಡು ಇನ್ನು ಹುಟ್ಟಿಲ್ಲಾ
ಆ ಗಂಡೆ ಹುಟ್ಟಿಲ್ಲಾ
ಆ ಭೀಮನ ಬಲದವನು, ಚಾಣಿಕ್ಯನ ಛಲದವನು
ಈ ದುರ್ಗದ ಹುಲಿ ಇವನು
ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
Written by: Chi. Udayashankar, Vijaya Bhaskar
instagramSharePathic_arrow_out

Loading...