制作
出演艺人
Rajesh Krishnan
领唱
Archana Udupa
领唱
Shyamsundar Kulkarni
表演者
Hamsalekha
音乐总监
作曲和作词
Shyamsundar Kulkarni
词曲作者
Hamsalekha
作曲
制作和工程
M. Sanjeev
制作人
歌词
ಪ್ರೇಮ, ಪ್ರೇಮ
ಪ್ರೇಮವೆಂದರೆ ಹೆಳಲು ಬಯಸಿ
ಹೇಳಲು ಆಗದ ಮಧುರ ಭಾವನೆ
ಮಧುರ ಕಾಮನೆ, ಮಧುರ ಯೋಚನೆ, ಮಧುರ ಯಾತನೆ
ಅರ್ಪಣೆ, ಸಮರ್ಪಣೆ ಸೂಚನೆ
ಮನಗಳ ಸರಿಗಮ ಪ್ರೇಮ
ಸುಮಗಳ ಘಮ ಘಮ ಪ್ರೇಮ
ಮಂಜಿನ ಚುಮು ಚುಮು ಪ್ರೇಮ
ಶ್ರಾವಣ ರಿಮಝಿಮ ಪ್ರೇಮ
ಯುಗ ಯುಗಗಳು ಕಳೆದರು
ಹಲವು ಜನುಮ ತಳೆದರು
ಓದಿ ಮುಗಿಸದ ಗ್ರಂಥ, ಪ್ರೇಮ
ಹಾಡಿ ಮುಗಿಸದ ಗೀತೆ, ಪ್ರೇಮ
ಎಂದೂ ಮುಗಿಯದ ಪಯಣ
ಒಂದು ಗೂಡುವ ತಾಣ
ಪ್ರೇಮ, ಪ್ರೇಮ, ಪ್ರೇಮ
ಮನಗಳ ಸರಿಗಮ ಪ್ರೇಮ
ಸುಮಗಳ ಘಮ ಘಮ ಪ್ರೇಮ
ಮಂಜಿನ ಚುಮು ಚುಮು ಪ್ರೇಮ
ಶ್ರಾವಣ ರಿಮಝಿಮ ಪ್ರೇಮ
ಎಂಥ ಹಿತಕರ ಮಿಡಿತ
ಯಾರು ತಡೆಯದ ತುಡಿತ
ಏನೋ ಹುಡುಕುವ ತವಕ
ಏಕೋ ಮೈ ಮನ ಪುಳಕ
ಪ್ರೇಮವು ಅನುಭವಕ್ಕೆ ಮಾತ್ರ ನಿಲುಕುವುವ ಕೋಮಲ ಕಲ್ಪನೆ
ಸ್ಪರ್ಶಿಸಲಾಗುವುದಿಲ್ಲ
ಆದರೆ ಮನಸು ಹೇಳುತಿದೆ
ಅದು ಇಲ್ಲೂಇದೆ, ಅಲ್ಲೂ ಇದೆ, ಏಲ್ಲೆಲ್ಲೂ ಇದೆ
ಮನಗಳ ಮಂಥನ ಪ್ರೇಮ
ಮಿಲನದ ಚಿಂತನ ಪ್ರೇಮ
ಹೃದಯದ ಸ್ಪಂದನಾ ಪ್ರೇಮ
ಬಿಡಿಸದ ಬಂಧನ ಪ್ರೇಮ
ಓ, ಗೆಳೆಯಾ
ನಾನೇ ಪ್ರೇಮದ ರೂಪ
ನಾನೇ ಪ್ರೇಮದ ದೀಪಾ
ಒಲಿದ ಜೋಡಿಯ ಜೊತೆಗೆ
ಉಸಿರಲಿ ಉಸಿರಾಗಿರುವೆ
ಆಕಾಶ ಗಂಗೆಯಲಿ ಮಿಂದು
ನಕ್ಷತ್ರ ಒಂದು ನನಗಾಗಿ ಇಂದು ಇಳೆಗೆ ಬಂದು
ಕಾಯುತಿಹುದೇ, ಸೆಳೆಯುತಿಹುದೇ, ಎಳೆಯುತಿಹುದೇ
ತನ್ನ ಬಳಿಗೆ
ಮನಗಳ ಸರಿಗಮ ಪ್ರೇಮ
ಸುಮಗಳ ಘಮ ಘಮ ಪ್ರೇಮ
ಮಂಜಿನ ಚುಮು ಚುಮು ಪ್ರೇಮ
ಶ್ರಾವಣ ರಿಮಝಿಮ ಪ್ರೇಮ
Written by: Hamsalekha, Shyamsundar Kulkarni