歌词
[Intro]
ಕನ್ನಡದ ಸಿದ್ದ
ಹಾಡೋದಕ್ಕೆ ಎದ್ದ
ಕನ್ನಡಕೆ ಇವನು
ಸಾಯೋದಕ್ಕು ಸಿದ್ದ
[Chorus]
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು
ನಾ ಉಸಿರಾಡೋ ಕಾಡಿವಳು
[Verse 1]
ಬರೆಯೋರ ತವರೂರು
ನಡೆಯೋರ ಹಿರಿಯೂರು
ನಟಿಸೋರ ನವಿಲೂರು
ನುಡಿಸೋರ ಮೈಸೂರು
ಕೂಡಿದರೆ ಕಾಣುವುದು ಎದೆ ತುಂಬಾ ಹಾಡಾಗುವುದು
ಮಧುರ ಮಧುರ ಇದು ಅಮರ ಅಮರ ಇದು
[Chorus]
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು
[Verse 2]
ಈ ಭಾಷೆ ಕಲಿಯೋದು
ಆಹಾ ಬೆಣ್ಣೆನ ತಿಂದಂತೆ
ನಮ್ಮ ಭಾಷೆ ಬರೆಯೋಕೆ
ಕಲಿಸೋರೆ ಬೇಡಂತೆ
ಹಾಡಿದರೆ ತಿಳಿಯುವುದು ಮೈ ತುಂಬಾ ಓಡಾಡುವುದು
ಸರಳ ಸರಳ ಇದು ವಿರಳ ವಿರಳ ಇದು
[Chorus]
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು
[Verse 3]
ಅಭಿಮಾನ ಹಾಲಂತೆ (ಹಾಲಂತೆ)
ದುರಭಿಮಾನ ವಿಷವಂತೆ
ಸಹಿಸೋರು ನಾವಂತೆ (ನಾವಂತೆ)
ನಿರಭಿಮಾನ ಬೇಡಂತೆ
ಕನ್ನಡತಿ ಆಜ್ಞೆಇದು ಅವಲೆದಯಾ ಹಾಡು ಇದು
ಅವಳ ಬಯಕೆ ಇದು ನಮಗೆ ಹರಕೆ ಇದು
[Chorus]
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು
ನಾ ಉಸಿರಾಡೋ ಕಾಡಿವಳು
[Outro]
ಸಿದ್ದವೋ ಸಿದ್ದವೋ
ಕನ್ನಡಕ್ಕೆ ಸಾಯಲು
ಸಿದ್ದವೋ ಬದ್ದವೋ
ಕನ್ನಡಕ್ಕೆ ಬಾಳಲು
Written by: Hamsalekha

