歌词
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ, ಹೋ, ತುಂಬಾ ಕುತೂಹಲ
ಹನಿ-ಹನಿಯ ಸವಿ ದನಿಯ ನಾ ವಿವರಿಸಿ ಹೇಳಲಾ?
Hmm, ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ, ಹೋ, ತುಂಬಾ ಕುತೂಹಲ
ಅದೇ-ಅದೇ ಮೋಡವೀಗ ವಿನೂತನ ರೂಪ ತಾಳಿ ನಿನ್ನ ಸೋಕಿದೆ
ಪದೇ-ಪದೇ ಗಂಧ ಗಾಳಿ ವಿಚಾರಿಸಿ ೧೦೦ ಬಾರಿ ಸುಮ್ಮನಾಗಿದೆ
ಕನಸಿನ ಕೊಡೆಯನು ಮನಸಲೇ ಬಿಡಿಸಲು ತುಂಬಾ ಕುತೂಹಲ
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ, ಹೋ, ತುಂಬಾ ಕುತೂಹಲ
ಇದೇನಿದು ಮೂಕಭಾವ ತಯಾರಿಯೇ ಇಲ್ಲದೇನೇ ನನ್ನ ಕಾಡಿದೆ
ನಿವೇದನೆ ಆದ ಮೇಲೂ ಸತಾಯಿಸಬೇಕು ನೀನು ನನ್ನ ನೋಡದೆ
ಸಿಡಿಲಿನ ಇರುಳಲೂ ಪಿಸುನುಡಿ ಕೇಳಲು ತುಂಬಾ ಕುತೂಹಲ
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ (ooh, ooh), ಹೋ, ತುಂಬಾ ಕುತೂಹಲ (ooh, ooh)
ಹನಿ-ಹನಿಯ ಸವಿ ದನಿಯ ನಾ ವಿವರಿಸಿ ಹೇಳಲಾ?
ಹೋ, ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು
ನನಗೆ ಕುತೂಹಲ, ಹೋ, ತುಂಬಾ ಕುತೂಹಲ
Written by: Jayanth Kaikini, V. Harikrishna