歌词
ಸುಮ್ಮನೇ ಹೀಗೆ ನಿನ್ನನೇ
ನೋಡುತ ಪ್ರೇಮಿಯಾದನೇ
ಜೀವವೇ ಹೋಗಲಿ
ನೀನಿರೆ ಈ ತೊಳಲಿ
ಯುಗಗಳೇ ಸಾಗಲಿ
ನಿನ್ನ ಜೊತೆಯಲಿ ಬದುಕಲು
ಜನಿಸುವೆ ಮರಳಿ
ಸುಮ್ಮನೇ ಹೀಗೆ ನಿನ್ನನೇ
ಮರೆತೇಬಿಡುವೆನು ಜಗವ ನಡು ನಡುವೆ
ಎಲ್ಲೋ ಹೊರಟರೆ ಎಲ್ಲೋ ತಲುಪಿರುವೆ
ಎಂಥ ಚೆಂದ ದೂರದಿಂದ
ನೀನು ನೀಡೋ ಹಿಂಸೆ
ನೀನೆ ನನ್ನ ಸ್ವಂತ ಅಂತ
ಲೋಕಕೆಲ್ಲಾ ಕೂಗಿ ಹೇಳೋ ಆಸೆ
ಸುಮ್ಮನೇ ಹೀಗೆ ನಿನ್ನನೇ
ನೋಡುತ ಪ್ರೇಮಿಯಾದನೇ
ಮೊದಲ ಮಳೆಯಲಿ
ನೆನೆದ ಅನುಭವವೇ
ಹೊ... ಬಿಡದೆ ಪದೇ ಪದೇ
ಮರಳಿ ತರುತಿರುವೆ
ನೂರು ನೂರು ಸಾವಿರಾರು
ಸಂಜೆಯಲ್ಲಿ ನಾವು
ಒಂಟಿ ಕೂತು ಬಾಕಿ ಮಾತು
ಆಡುವಾಗ ಅಲ್ಲಿ ಬರಲಿ ಸಾವು
ಸುಮ್ಮನೇ ಹೀಗೆ ನಿನ್ನನೇ
ನೋಡುತ ಪ್ರೇಮಿಯಾದನೇ
Written by: Arjun Janya, Kavi Raj