歌词
ಸ್ವಾತಿ ಮುತ್ತಿನ ಮಳೆಹನಿಯೇ
ಮೆಲ್ಲಮೆಲ್ಲನೆ ಧರೆಗಿಳಿಯೇ
ಸ್ವಾತಿ ಮುತ್ತಿನ ಮಳೆಹನಿಯೇ
ಮೆಲ್ಲಮೆಲ್ಲನೆ ಧರೆಗಿಳಿಯೇ
ನನ್ನಾ ರಾಣಿಯ ಹೃದಯದ ಚಿಪ್ಪಿಗೆ ಬಾರೆ ಸರಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು ಧುಮುಕೇ ಮಿರಮಿರನೆ
ಸ್ವಾತಿ ಮುತ್ತಿನ ಮಳೆಹನಿಯೇ
ಮೆಲ್ಲಮೆಲ್ಲನೆ ಧರೆಗಿಳಿಯೇ
ಸ್ವಾತಿ ಮುತ್ತಿನ ಮಳೆಹನಿಯೇ
ಮೆಲ್ಲಮೆಲ್ಲನೆ ಧರೆಗಿಳಿಯೇ
ನನ್ನಾ ರಾಜನ ಹೃದಯದ ಚಿಪ್ಪಿಗೆ ಬಾರೆ ಸರಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು ಧುಮುಕೇ ಮಿರಮಿರನೆ
ಪ್ರೇಮದ ಕಾಶಿಯಲಿ, ಮಳೆಯೇ ನಮಗೆ ಸ್ನಾನ
ಕನಸೇ ಮನದಾ ಧ್ಯಾನ
ಮೈ ನಡುಗುವ ಚಳಿಯಲ್ಲಿ, ಈ ಬೆಚ್ಚನೆ ಸವಿಗಾನ
ಪ್ರೇಮದ ಹಬ್ಬದಲಿ ಗುಡುಗೇ ನಮಗೆ ಮೇಳ
ಸಿಡಿಲೇ ಅದರಾ ತಾಳ
ಆ ಮಿಂಚಿನ ಬೆಳಕಲ್ಲೇ, ಈ ಹೃದಯದ ಸಮ್ಮೇಳ
ಆನಂದದ ಆಲಾಪದ ಆಲಿಂಗನವೋ
ಈ ನಿಮಿಷದ ಈ ಮೋಹದ ಆಪೋಶನವೋ
ಈ ಹೆದರುವ ಥರದಲ್ಲಿ, ಈ ಪ್ರೇಮದ ಗುಣಗಾನ
ಸ್ವಾತಿ ಮುತ್ತಿನ ಮಳೆಹನಿಯೇ
ಮೆಲ್ಲಮೆಲ್ಲನೆ ಧರೆಗಿಳಿಯೇ
ನನ್ನಾ ರಾಣಿಯ ಹೃದಯದ ಚಿಪ್ಪಿಗೆ ಬಾರೆ ಸರಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು ಧುಮುಕೇ ಮಿರಮಿರನೆ
ಬೆಳ್ಳಿಯ ತಾರೆಗಳಾ, ತರುವೆ ನಿನಗೇ ಕೊಡುವೆ
ನಿನ್ನಾ ಮುಡಿಗೇ ಇಡುವೆ
ಈ ಪ್ರೇಮದ ಸಾಹಸಕೆ, ನನಗೇನೇ ನೀ ತರುವೆ
ಪ್ರೇಮದ ಮಹಲಿನಲಿ, ನನಗೂ ನಿನಗೂ ನಡುವೆ
ಪರದೆ ಸರಿಯೇ ಮದುವೆ
ಆ ಹುಣ್ಣಿಮೆ ರಾತ್ರಿಯಲಿ, ನಾ ಮುತ್ತಿನ ಮಳೆಗರೆವೆ
ಆ ಶುಭದಿನ ಭೋರ್ಗರೆಯುವ ನೀರಾಗುವೆ ನಾ
ಆ ಮಿಲನಕೆ ಹಾತೊರೆಯುವ ಸಾಗರವು ನಾ
ಆ ಸಾಗರ ಸಂಗಮಕೆ, ಈ ಉಸಿರಾ ಹಿಡಿದಿಡುವೆ
ಸ್ವಾತಿ ಮುತ್ತಿನ ಮಳೆಹನಿಯೇ
ಮೆಲ್ಲಮೆಲ್ಲನೆ ಧರೆಗಿಳಿಯೇ
ಸ್ವಾತಿ ಮುತ್ತಿನ ಮಳೆಹನಿಯೇ
ಮೆಲ್ಲಮೆಲ್ಲನೆ ಧರೆಗಿಳಿಯೇ
ನನ್ನಾ ರಾಜನ ಹೃದಯದ ಚಿಪ್ಪಿಗೆ ಬಾರೆ ಸರಸರನೆ
ಪ್ರೀತಿಯ ಮುತ್ತಿನ ಹಾರವ ಕಟ್ಟಲು ಧುಮುಕೇ ಮಿರಮಿರನೆ
Written by: Hamsalekha