歌词
ಬಿರುಗಾಳಿಯೊಂದಿಗೆ
ಕಿರು ದೀಪ ಹೇಳಿದೆ
ನೀನಾಗು ನನ್ನಯ ಸಂಜೀವಿನಿ
ಇರುವಷ್ಟು ಜೀವನ
ಒಲವಿಂದ ತುಂಬುತ
ಮಾಯಾವಿಯೇ ಮತಾಡು ನೀ
ಬಿರುಗಾಳಿಯೊಂದಿಗೆ
ಕಿರು ದೀಪ ಹೇಳಿದೆ
ನೀನಾಗು ನನ್ನಯ ಸಂಜೀವಿನಿ
ಬೊಗಸೆಯ ನಡುವೆಯೆ
ಅರಳಿ ನಗುವಾಗ ಮುಖ ಪುಟ
ಒಳಗಿನ ಹೂ ಹ್ರುದಯದ
ವಿವರ ನನಗೀಗ ಪರಿಚಿತ
ಜೊತೆಯಿದ್ದು ಕೂಡ
ಅನಿವಾಸಿ ನೀನು
ಎಲ್ಲೆಲ್ಲೂ ಮೂಡಿಸಿ
ಮುದ್ದಾದ ಮಾರ್ದನಿ
ರೂವಾರಿಯೆ
ಮಾತಾಡು ನೀ
ನಿದಿರೆಯೆ ಬರದಿರು
ಎದುರೆ ಸಿಹಿಯಾದ ಕನಸಿದೆ
ಬದುಕಿನ ಈ ಗುಟುಕಿಗೆ
ಎದೆಯ ಗಡಿಯಾರ ಚಲಿಸಿದೆ
ತುಟಿಯಲ್ಲಿ ನಿನ್ನ
ಹಾಡಾಗಿಸೆನ್ನ
ನನ್ನೆಲ್ಲೆ ಇಂಗಲಿ
ನಿನ್ನೆಲ್ಲಾ ಕಂಬನಿ
ಚೈತನ್ಯವೇ
ಮತಾಡು ನೀ
ಬಿರುಗಾಳಿಯೊಂದಿಗೆ
ಕಿರು ದೀಪ ಹೇಳಿದೆ
ನೀನಾಗು ನನ್ನಯ ಸಂಜೀವಿನಿ
Written by: Arjun Janya, Jayanth Kaikini

