音乐视频
音乐视频
制作
出演艺人
Sonu Nigam
领唱
Shreya Ghoshal
领唱
K. Kalyan
表演者
Radhika Pandit
演员
Krishna Ajay Rao
演员
V. Harikrishna
表演者
作曲和作词
K. Kalyan
词曲作者
V. Harikrishna
作曲
制作和工程
D Beats
制作人
歌词
ನಿನ್ನಲ್ಲೇ ನಾನು ಜೊತೆಯಾಗಿ
ನನ್ನಲ್ಲೇ ನೀನು ಬದುಕಾಗಿ
ಬಾಳೋಣ ನಾವು ಒಂದಾಗಿ ಎಂದೆಂದಿಗೂ
ನೀನಾಡೋ ಮಾತು ನನದಾಗಿ
ನನ್ನೆಲ್ಲಾ ಆಸೆ ನಿನದಾಗಿ
ಇರೋಣ ಒಂದೇ ಗುರುತಾಗಿ ಎಂದೆಂದಿಗೂ
ಪ್ರತಿ ಕ್ಷಣವೂ ಪ್ರೀತಿ ಮಾಡುವೆ ಪ್ರಾಣ ನಿಂತ್ಹೋದರೂ
ನೆರಳು ಸಹ ಸೋಕಲಾರರು ಬೇರೆ ಯಾರು
ನಿನ್ನಲ್ಲೇ ನಾನು ಜೊತೆಯಾಗಿ
ನನ್ನಲ್ಲೇ ನೀನು ಬದುಕಾಗಿ
ಬಾಳೋಣ ನಾವು ಒಂದಾಗಿ ಎಂದೆಂದಿಗೂ
ನೆನ್ನೆಗಿಂತ ಇನ್ನು ಹೆಚ್ಚು ಪ್ರೀತಿ ಮಾಡೋ ಆಸೆ ನನ್ನದು
ನಿನ್ನ ಎದೆಗೆ ನಾನು ಒರಗಿ ಬದುಕಿಬಿಡುವೆ ಎಂದೂ ಹೀಗೆ
ಕೊನೆಮೊದಲು ಇಲ್ಲಾ ನಮಗೆ ಕನಸುಗಳ ಚೆಲ್ಲು ಹೊರಗೆ
ನಿನ್ನ ಕಣ್ಣಾ ತುದಿಯಲ್ಲಿ ಕಾದು ಕುಳಿತೆ ಬೊಗಸೆ ಹಿಡಿದು
ಎದೆ ತುಂಬಿ ಹಾಡುವೆ ನೀನೆ ನನ್ನ ಜೀವನ
ನಿನ್ನ ಉಸಿರ ಕಾಯುವ ಉದ್ಯೋಗಿ ನಾ
ನಿನ್ನಲ್ಲೇ ನಾನು ಜೊತೆಯಾಗಿ
ನನ್ನಲ್ಲೇ ನೀನು ಬದುಕಾಗಿ
ಬಾಳೋಣ ನಾವು ಒಂದಾಗಿ ಎಂದೆಂದಿಗೂ
ನಗುತಿರಲು ನಿನ್ನ ಮನಸು ನಿನ್ನಾ ನೆನಪೇ ಹೊಸ ಸೊಗಸು
ನಿನ್ನ ಹೆಜ್ಜೆ ಗುರುತೆ ನನ್ನ ಹಣೆಯ ಬರಹ ಕಲಕಿ ತಿಳಿಸು
ಸದಾ ಕಾಲ ಒಂದಾಗಿರುವ ಪ್ರತಿ ಹೆಜ್ಜೆ ಜೋತೆಲಿಡುವ
ಕ್ಷಣವೂ ಕೂಡ ಬಿಟ್ಟಿರಲಾರೆ ದೂರ ಮಾಡಿ ಹೋಗಲಾರೆ
ನಿನ್ನ ಮರೆತು ಬಾಳುವ ದೈರ್ಯ ಇಲ್ಲ ನನ್ನಲಿ
ಸಾವಿನಾಚೆ ಪ್ರೀತಿಯು ನಿಜವಾಗಲಿ
ನಿನ್ನಲ್ಲೇ ನಾನು ಜೊತೆಯಾಗಿ
ನನ್ನಲ್ಲೇ ನೀನು ಬದುಕಾಗಿ
ಬಾಳೋಣ ನಾವು ಒಂದಾಗಿ ಎಂದೆಂದಿಗೂ
Written by: K. Kalyan, V. Harikrishna