歌詞
ಕಾದಿರುವೆ ನಿನಗಾಗಿ, ನೋಡುವೆಯಾ ನೀ ತಿರುಗಿ?
ಹೇಗಿರಲಿ ನೀನಿರದೆ?
ಹೇಳುವೆಯಾ ಮನಸಾಗಿ?
ಒಲವಿನ ಹೂವೊಂದು ಅರಳಿದೆ ನಿನ್ನಿಂದೇ
ಹಿಂತಿರುಗಿ ನೋಡು ಒಮ್ಮೆ
(सजदा, मेरे सजदा, सजदा
सजदा-ना
सजदा, मेरे सजदा, सजदा
सजदा
सजदा, मेरे सजदा, सजदा
सजदा
सजदा, मेरे सजदा, सजदा)
ಈ ಬಾಳ ಯಾನಕೀಗ ನೀನಾದೆ ಸಹಚಾರಿ
ಬೇಕಿಲ್ಲ ಬೇರೆ ಯಾವ ದಾರಿ
ನೋವಲ್ಲೂ ನಲಿವಲ್ಲೂ ನಾ ಕಾಣೋ ಕನಸಲ್ಲೂ
ಬೇಕಿಗ ನಿನ್ನ ಹೆಜ್ಜೆದಾರಿ
ಒಲಿದರೂ ನೀ ಬೇಕು, ಮುನಿದರೂ ನೀ ಬೇಕು
ನೀ ನಗುತ ನೋಡು ಸಾಕು
ನೀ ನಗುತ ನೋಡು ಸಾಕು
(सजदा, मेरे सजदा, सजदा
सजदा-ना
सजदा, मेरे सजदा, सजदा)
ಕಾದಿರುವೆ ನಿನಗಾಗಿ, ನೋಡುವೆಯಾ ನೀ ತಿರುಗಿ?
ನೀನಾಡೋ ಮಾತಿನಲ್ಲಿ ನನ್ನೊಮ್ಮೆ ನೆನೆ ಸಾಕು
ಮರೆತಾದರೂ ಕೂಗು ಸಾಕು
ಕಾಡಿಸೋ ಮನಸೇಕೆ?
ನೋವಿಸೋ ಛಲವೇಕೆ?
ಪ್ರೀತಿಗೆ ಇಂಥ ಶಿಕ್ಷೆ ಬೇಕೇ?
ಈ ನನ್ನ ಜಗಕೀಗ ನೀನೇನೇ ಅಧಿಕಾರಿ
ನೀ ಹೇಳು, ಏನು ಬೇಕು?
ನೀ ಹೇಳು, ಏನು ಬೇಕು?
(सजदा, मेरे सजदा, सजदा
सजदा-ना
सजदा, मेरे सजदा, सजदा
सजदा)
ಕಾದಿರುವೆ ನಿನಗಾಗಿ (सजदा, मेरे सजदा, सजदा, सजदा)
ನೋಡುವೆಯಾ ನೀ ತಿರುಗಿ? (सजदा, मेरे सजदा, सजदा, सजदा)
Written by: Shashank, Sridhar V. Sambhram, V. Shridhar