Hudební video

Hudební video

Texty

ಮುದ್ದು ನೀನು ಮುದ್ದು ನೀನು
ಎದೆಯ ನಡೆಸೋ ಸದ್ದು ನೀನು
ಅಚ್ಚು ನೀನು ಮೆಚ್ಚು ನೀನು
ಪ್ರೀತಿಯ ರಚ್ಚು ನೀನು
ಮೊದಲಾಸಲ ನೋಡಿ ನಾ ಕರಗಿ ಹೋದೆ
ಬದುಕೆಲ್ಲಾ ಸ್ವರವಾಗಿದೆ
ಅಷ್ಟೊಂದು ಇಷ್ಟ ಯಾಕಾದೆ ನಂಗೆ
ಹೃದಯಕ್ಕೆ ಹಿತವಾಗಿದೆ
ನಿಸಗಮ ಪಾಮಪಾಮ ಪನಿಪ ಪನಿಪಮ ಗಪಮ
ಪಾಮಪಾಮ ಪನಿಸನಿಪ ಪನಿಪಮ ಗಪಮಾಗರಿಸ
ಪಾಮಪಾಮ ಪನಿಪ ಪನಿಪಮ ಗಪಮಾ
ಪಾಮಪಾಮ ಪನಿಸನಿಪ ಪನಿಪಮ ಗಪಮಾಗರಿಸ
ಬದಲಾಯಿಸಿಬಿಟ್ಟೆ ಜಗವನ್ನೇ ಕಂದ
ಮುಡುಪಾಗಿ ಇಟ್ಟೆ ನಾ ಪೂರ್ತಿ ಜನುಮಾನ
ನಗುವಾಗ ಕೆನ್ನೆ ಗುಳಿಯಲ್ಲಿ ನೀನು
ನನಗಂತೂ ಚಂದ್ರಾನೆ ಉದಯ ಮಧ್ಯಾಹ್ನ
ಅತಿಯಾಗಿ ಪ್ರೀತಿಸು ಅತಿಯಾಗಿ ಅರ್ಪಿಸು
ಇರದೇನೆ ಒಂಚೂರು ಅಭ್ಯಂತರ
ಹೂವಾಗಿ ವಾಲುವೆ ನೀ ತಂದ ಗಾಳಿಗೆ
ನೀನಾಗು ನನ್ನನ್ನ ಕಟ್ಟೋದಾರ
(ಮಾಂಗಲ್ಯಮ್ ತಂತುನಾನೇನ ಮಮ ಜೀವನ ಹೇತುನಾ)
ಕಂಠೆ ಬಧ್ನಾಮಿ ಸುಭಗೇ
ತ್ವಂ ಜೀವ ಶರದಾಂ ಶತಮ್
ನಿಸಗಮ ಪಾಮಪಾಮ ಪನಿಪ ಪನಿಪಮ ಗಪಮ
ಪಾಮಪಾಮ ಪನಿಸನಿಪ ಪನಿಪಮ ಗಪಮಾಗರಿಸ
ಯಾರ ದೃಷ್ಟಿಯಲ್ಲಿ ನೀನೇನೆ ಆಗಿರು
ನನಗಂತೂ ಕಣ್ಣಿನಲಿ ಪ್ರತಿ ಮಿಟುಕು ನೀನು
ಸಹಕಾರವಿರಲಿ ಸಹಬಾಳ್ವೆಯಲ್ಲಿ
ಅನುಸರಿಸಿ ಇಡಬೇಕು ಪ್ರತಿಹೆಜ್ಜೆಯನ್ನು
ಮನದಲ್ಲಿ ಗೋಡೆಗೆ ಬಳಿಯೋಣ ಭಾವನೆ
ನಗುವೆಂಬ ಚಂದದ ರಂಗು ಹರಡಿ
ಪ್ರತಿಬಿಂಬ ಕಂಡಿದೆ ಪ್ರತೀಬಾರಿ ಕಣ್ಣಲಿ
ಮತ್ಯಾಕೆ ಮನೆಯಲ್ಲಿ ಬೇರೆ ಕನ್ನಡಿ
ಮುದ್ದು ನೀನು ಮುದ್ದು ನೀನು
ಎದೆಯನಡೆಸೊ ಸದ್ದು ನೀನು
ಮುದ್ದು ನೀನು ಮುದ್ದು ನೀನು
ಪ್ರೀತಿಯ ತುತ್ತು ನೀನು
ಅಷ್ಟೊಂದು ಇಷ್ಟ ಆಗೋದೇ ನನಗೆ
ನಿನ್ನಿಂದ ಹಗಲಾಗಿದೆ
ಎಷ್ಟೊಂದು ಪ್ರೀತಿ ನಿನ್ನಿಂದ ನನಗೆ
ಸ್ವರ್ಗಾನೆ ಮಡಿಲಲ್ಲಿದೆ
ನಿಸಗಮ ಪಾಮಪಾಮ ಪನಿಪ ಪನಿಪಮ ಗಪಮ
ಪಾಮಪಾಮ ಪನಿಸನಿಪ ಪನಿಪಮ ಗಪಮಾಗರಿಸ
ಪಾಮಪಾಮ ಪನಿಪ ಪನಿಪಮ ಗಪಮಾ
ಪಾಮಪಾಮ ಪನಿಪ ಪನಿಪಮ ಗಪಮಾ
ಪಾಮಪಾಮ ಪನಿಸನಿಪ ಪನಿಪಮ ಗಪಮಾಗರಿಸ
Written by: Manikanth Kadri, Nagarjun Sharma
instagramSharePathic_arrow_out

Loading...