Songtexte
ಕಾವೇರಿ ಕಾಣೆಯಾದಳು
ಈ ನಮ್ಮ ಕಲಾವಿದರನ್ನ ಯಾಕೆ ಬಿಟ್ಟು ಹೋದಳು
ಕಾವೇರಿ ಕಾಣೆಯಾದಳು
ಈ ನಮ್ಮ ಕಲಾವಿದರನ್ನ ಯಾಕೆ ಬಿಟ್ಟು ಹೋದಳು
ಬಂಗರದೂರು ಬೆಂಗಳೂರು ಅನ್ಕೊಂಡು ಬಂದ್ವಿ
ನೂರಾರು ಕನಸು ಮಣಿಪುರದಿಂದ ನಾವು ತಂದ್ವಿ
ಹಲವಾರು ಭಾಷೆ ಸಿನಿಮಾವನ್ನ ಇಲ್ಲೇ ನೋಡ್ತಿದ್ವಿ
ಶೀಳೆ ಚಪ್ಪಾಳೆ ಹೊಡಿತಾ ನಮ್ಮ್ ಸಿನಿಮಾ ಕನಸು ಕಂಡ್ವಿ
ಮಣಿಪುರು ನಮ್ಮ ಊರು
ಆದ್ರೆ ಕರುನಾಡೇ ಕೊಟ್ಟಿರೋ ಉಸಿರು
ನಾವು ಹೋದಮೇಲೂ ಇರಬೇಕು ನೋಡಿ ನೆನಪಿರಲಿ ನಮ್ಮ ಹೆಸರು
ಕೆಲಸಾ ಹುಡ್ಕೊಂಡ್ ಇಲ್ಲಿ ಬಂದ್ವಿ
ನಿಮ್ಮೆಲ್ಲರ ಜೊತೆ ಹೊಂದ್ಕೊಂಡ್ವಿ
ಮನೆಯ ನೆನಪು ಕಾಡಿ ಕೊರಗಿದ್ದಾಗೆಲ್ಲ ದೇವರಾಗಿ ನೀವು ಬಂದ್ರಿ
ಕಾವೇರಿ ಕಾಣೆಯಾದಳು
ಈ ನಮ್ಮ ಕಲಾವಿದರನ್ನ ಯಾಕೆ ಬಿಟ್ಟು ಹೋದಳು
ಕನ್ನಡ ಕಲಿಯೋಕ್ ನಮಗಿಷ್ಟ ಆದ್ರೆ ಮಾತಾಡೋಕ್ ನಿಮ್ಗ್ ಕಷ್ಟ
ಏನಾದ್ರು ಬರಲಿ ಬಿಡಲಿ ಇರಲಿ ಕಾವೇರಿ ಹೋಗಿದ್ದು ನಮ್ಮ್ ನಷ್ಟ
ಶುರುವಾಗಿತ್ತು ಅಣ್ಣಾವ್ರ ಬಂಗಾರ ಪಂಜರ
ಅಪ್ಪು ದೇವರ ನೆಚ್ಚಿನ ಚಿತ್ರ ಮಂದಿರ
ಚೀನಿ ರಂಗದ ಈ ಬೆಳ್ಳಿ ಚಪ್ಪರ
ನಮ್ಮ್ ಚಿಲ್ಲಿ ಚಿಕನ್ ಬಾರೋ ಮುಂಚೆ ಬಂತ್ ಈ ಬರ
ಬೆಂಗಳೂರಿನಲ್ಲಿ ಬೇರೆಯವರದ್ದೇ ಬೆಳೆನೆ ಬೇಯೋದ್ರಿ
ಓ ಕನ್ನಡ ಪ್ರೇಕ್ಷಕ ನಮ್ಮ ಪ್ರಯತ್ನಕ್ಕೆ ಆಶಿರ್ವಾದಿಸಿರಿ
ಏನೆ ಆಗ್ಲಿ ಕಾವೇರಿ ಥೀಯೇಟರ್ ಯಾವತ್ತಿಗೂ ನಮ್ಮದು
ನಮ್ಮ್ ಕಲಾವಿದರ ಪ್ರೋತ್ಸಾಹನೆಯ ಜವಾಬ್ದಾರಿ ನಿಮ್ಮದು
ಕಾವೇರಿ ಕಾಣೆಯಾದಳು
ಈ ನಮ್ಮ ಕಲಾವಿದರನ್ನ ಯಾಕೆ ಬಿಟ್ಟು ಹೋದಳು
Written by: Deepak Nayak, Deepaknayak, Sridhar Shivamogga