Lyrics
ಕಾಣೆಯಾಗಿರುವೆ ನಾನು
ಎದುರಲಿ ಕಾಣುತಿರುವಾಗ ನೀನು
ಕಾಣೆಯಾಗಿರುವೆ ನಾನು
ಎದುರಲಿ ಕಾಣುತಿರುವಾಗ ನೀನು
ಗಾಯಕ್ಕೆ ಕುಡಿನೋಟ ಸಾಕು
ಮಾಯಿಸೋ ಒಡನಾಟ ಬೇಕು
ಮಾತಾಡುವ ದೇವರೇ ನೀನು
ಕಾಣೆಯಾಗಿರುವೆ ನಾನು
ಎದುರಲಿ ಕಾಣುತಿರುವಾಗ ನೀನು
ಕಾಣೆಯಾಗಿರುವೆ ನಾನು
ಎದುರಲಿ ಕಾಣುತಿರುವಾಗ ನೀನು
ನಿನ್ನ ಕಿರುಬೆರಳ ತುದಿಯಲಿ ಕುಣಿಸು ನನ್ನ
ಸಣ್ಣ ಪರಿಮಳವ ಉಸಿರಲಿ ಬೆರೆಸು ಚಿನ್ನ
ನೀನು ತೊಟ್ಟಿರುವ ಉಡುಪಿಗೂ ಎಷ್ಟು ಜಂಭ
ನೀನು ಸಿಗದಿರಲು ಅಲೆಯುವೆ ಊರತುಂಬಾ
ಪ್ರೀತಿಯ ಅವತಾರ ನೂರು
ತೋರುತ ನೀ ಸನಿಹ ಕೂರು
ಈ ಜೀವದ ಕಾಳಜಿ ನೀನು
ಕಾಣೆಯಾಗಿರುವೆ ನಾನು
ಎದುರಲಿ ಕಾಣುತಿರುವಾಗ ನೀನು
ನಿನ್ನ ನೆನಪುಗಳೇ ಮನಸಿಗೆ ಪಾರಿಜಾತ
ದಿವ್ಯ ನಸು ನಗುವೇ ಕನಸಿನ ಜಾಹೀರಾತ
ನೀನು ಕರೆದರೇ ನಾ ಬರುವೆನು ಹಾಗೇನಿಲ್ಲ
ನಿನ್ನ ಜೊತೆಗಿರುವ ಕ್ಷಣಗಳೇ ಜೋನಿಬೆಲ್ಲ
ವಾಸಿಸು ಕನಸಲ್ಲಿ ಬಂದು
ಪ್ರೀತಿಸು ಹೃದಯಾನೇ ನಿಂದು
ಓ ನೀನಿಲ್ಲದೆ ತಬ್ಬಲಿ ನಾನು
ಕಾಣೆಯಾಗಿರುವೆ ನಾನು
ನಾನು
ಎದುರಲಿ ಕಾಣುತಿರುವಾಗ ನೀನು
ನೀನು
ಕಾಣೆಯಾಗಿರುವೆ ನಾನು
ಎದುರಲಿ ಕಾಣುತಿರುವಾಗ ನೀನು
Written by: Arjun Janya, Jayanth Kaikini

