Vídeo musical
Vídeo musical
Créditos
PERFORMING ARTISTS
Prem
Lead Vocals
COMPOSITION & LYRICS
R P Patnayak
Composer
Nagendra Prasad
Songwriter
Letras
(ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ)
ಬಾಳಿಗೆ ಒಂದೇ ಮನೆ
ಬಾಳೆಗೆ ಒಂದೇ ಗೊನೆ
ಭೂಮಿಗೆ ದೈವ ಒಂದೇನೆ ತಾಯಿ
ದಾರಿಗೆ ಒಂದೇ ಕೊನೆ
ರಾಗಿಗೆ ಒಂದೇ ತೆನೆ
ಸೃಷ್ಟಿಸೋ ಜೀವ ಒಂದೇನೆ ತಾಯಿ
(ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ)
(ತಾಯಿ)
ಜಗದೊಳಗೆ ಮೊದಲು ಜನಿಸಿದಳು
ಹುಡುಕಿದರೆ ಮೂಲ ಸಿಗದಯ್ಯ
ದಡವಿರದ ಕರುಣೆ ಕಡಲಿವಳು
ಗುಡಿ ಇರದ ದೇವಿ ಇವಳಯ್ಯ
ಮನಸು ಮಗು ಥರಾ ಪ್ರೀತಿಯಲಿ
ಅರಸೋ ಹಸು ಥರಾ ತ್ಯಾಗದಲಿ
ಜಗ ಕೂಗೋ ಜನನಿ ಜೀವದ ಜೀವ ತಾಯಿ
(ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ)
ಪದಗಳಿಗೆ ಸಿಗದ ಗುಣದವಳು
ಬರೆಯುವುದು ಹೇಗೆ ಇತಿಹಾಸ?
ಬದುಕುವುದ ಕಲಿಸೋ ಗುರು ಇವಳು
ನರಳುವಳು ಹೇಗೋ ನವ ಮಾಸ?
ಗಂಗೆ ತುಂಗೆಗಿಂತ ಪಾವನಳು
ಬೀಸೋ ಗಾಳಿಗಿಂತ ತಂಪಿವಳು
ಜಗ ಕೂಗೋ ಜನನಿ ಜೀವದ ಜೀವ ತಾಯಿ
(ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ)
ಬಾಳಿಗೆ ಒಂದೇ ಮನೆ
ಬಾಳೆಗೆ ಒಂದೇ ಗೊನೆ
ಭೂಮಿಗೆ ದೈವ ಒಂದೇನೆ ತಾಯಿ
ದಾರಿಗೆ ಒಂದೇ ಕೊನೆ
ರಾಗಿಗೆ ಒಂದೇ ತೆನೆ
ಸೃಷ್ಟಿಸೋ ಜೀವ ಒಂದೇನೆ ತಾಯಿ
(ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ ಕಾಲು ಮುಗಿದರೋ)
Written by: Nagendra Prasad, R P Patnayak


