Créditos

PERFORMING ARTISTS
Nanditha
Nanditha
Lead Vocals
S.P. Balasubrahmanyam
S.P. Balasubrahmanyam
Lead Vocals
V. Ravichandran
V. Ravichandran
Music Director
COMPOSITION & LYRICS
V. Ravichandran
V. Ravichandran
Songwriter
PRODUCTION & ENGINEERING
M.K. Balamuttayya
M.K. Balamuttayya
Producer

Letras

ದೇವರು ಬರೆದ ಕಥೆಯಲ್ಲಿ, ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆತ್ತವಳು ಬರೆದ ಕಥೆಯಲ್ಲಿ, ಕಂದನ ಪ್ರೀತಿಯೇ ಮೊದಲಿಲ್ಲಿ
ಆರಾರಿರಾರೋ ಹಾಡು
ಪ್ರೀತಿಗೆ ಮೊದಲ ಹಾಡು
ಅಮ್ಮ ಅನ್ನೋ ಮಾತು
ಪ್ರೀತಿಗೆ ಮೊದಲ ತುತ್ತು
ದೇವರು ಬರೆದ ಕಥೆಯಲ್ಲಿ, ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆತ್ತವಳು ಬರೆದ ಕಥೆಯಲ್ಲಿ, ಕಂದನ ಪ್ರೀತಿಯೇ ಮೊದಲಿಲ್ಲಿ
ನೋವಿಗೆ ಮೊದಲ ಔಷಧಿ, ಅಮ್ಮ ಅನ್ನೋ ಕೂಗೆ
ಕಂದನ ಮೊದಲ ಆಸೆಗೆ, ತಾಯಿ ನಾಂದಿಯಂತೆ
ಮೊದಲಿಗೆ ಮೊದಲಿಲ್ಲಿ, ಈ ತಾಯಿಯೇ ಮೊದಲಿಲ್ಲಿ
ಒಂಬತ್ತಾದರು ತೊಂಬತ್ತಾದರು
ಈ ಪ್ರೀತಿ ಬದಲಾಗದು
ಗರ್ಭದ ಗುಡಿಯಲಿ ಭಗವಂತ, ತಾನೇ ಕುಳಿತ ಸ್ವಾರ್ಥಿ ಕಣೋ
ತಾಯಿಯು ಗರ್ಭವ ಕಂದನಿಗೆ, ಮೀಸಲು ಇಡುವ ನಿಸ್ವಾರ್ಥಿ ಕಣೋ
ಕರುಳನೇ ತೊಟ್ಟಿಲ ಮಾಡಿ, ಕಂದನನ್ನು ತೂಗುವಳು
ಮನಸನೇ ಮೆಟ್ಟಿಲ ಮಾಡಿ, ಕನಸನ್ನು ಜೈಸುವಳು
ಕೊನೆಗೆ ಕೊನೆಯೆಲ್ಲಿ, ತಾಯಿ ಪ್ರೀತಿಗೆ ಕೊನೆಯೆಲ್ಲಿ
ಜೊತೆಗೆ ಇದ್ದರೂ ಇಲ್ಲದಿದ್ದರೂ
ಈ ಪ್ರೀತಿ ಬದಲಾಗದು
ದೇವರು ಬರೆದ ಕಥೆಯಲ್ಲಿ, ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆತ್ತವಳು ಬರೆದ ಕಥೆಯಲ್ಲಿ, ಕಂದನ ಪ್ರೀತಿಯೇ ಮೊದಲಿಲ್ಲಿ
ಆರಾರಿರಾರೋ ಹಾಡು
ಪ್ರೀತಿಗೆ ಮೊದಲ ಹಾಡು
ಅಮ್ಮ ಅನ್ನೋ ಮಾತು
ಪ್ರೀತಿಗೆ ಮೊದಲ ತುತ್ತು
ದೇವರು ಬರೆದ ಕಥೆಯಲ್ಲಿ, ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆತ್ತವಳು ಬರೆದ ಕಥೆಯಲ್ಲಿ, ಕಂದನ ಪ್ರೀತಿಯೇ ಮೊದಲಿಲ್ಲಿ
Written by: V. Ravichandran
instagramSharePathic_arrow_out

Loading...