Paroles

ಬರೆಯದ ಮೌನದ ಕವಿತೆ ಹಾಡಾಯಿತು ಎದೆಯಲಿ ನೆನಪಿನ ನೋವು ಸುಖ ತಂದಿತು ಬರೆಯದ ಮೌನದ ಕವಿತೆ ಹಾಡಾಯಿತು ಎದೆಯಲಿ ನೆನಪಿನ ನೋವು ಸುಖ ತಂದಿತು ಹೃದಯದಿ ಪ್ರೇಮ ತರಂಗ ನೀ ಮೀಟಿದೆ ಬದುಕಿಗೆ ನೂತನ ಅರ್ಥ ನೀ ನೀಡಿದೆ ಸುಮಧುರ ಅನುಭವ ನೂರು ನಾ ನೋಡಿದೆ ನಡೆಯುವ ಮುಂದಿನ ದಾರಿ ಮರೆ ಎಂದಿದೆ ನಡೆ ಎಂದಿದೆ ಗುರಿ ತೋರಿದೆ ಹೃದಯದಿ ಪ್ರೇಮ ತರಂಗ ನೀ ಮೀಟಿದೆ ಬದುಕಿಗೆ ನೂತನ ಅರ್ಥ ನೀ ನೀಡಿದೆ ಹೂವ ಕಂಪು ಪರರಿಗಾಗಿ ಸಕಲ ಜನ್ಮವು ಪರರ ಬಾಳು ಬೆಳಗಿದಾಗ ಬಾಳು ಪೂರ್ಣವು ಕಾಲ ಬರೆದ ಹೊಸತು ಹಾಡು ಹಾಡಲಾರೆನು ಮನದ ಪುಟದೀ ಬರೆದ ಗೀತೆ ಮರೆಯಲಾರೆನು ಎಲ್ಲಿಯ ಬಂದವು ಕಾಣೆ ಬೆಸೆಯಿತು ಜೀವಕೆ ಜೀವ ಅರ್ಪಣೆ ಮಾಡುವೆ ನಿನಗೆ ನನ್ನ ಈ ಹೃದಯದ ಭಾವ ಬರೆಯದ ಮೌನದ ಕವಿತೆ ಹಾಡಾಯಿತು ಎದೆಯಲಿ ನೆನಪಿನ ನೋವು ಸುಖ ತಂದಿತು ಸುಮಧುರ ಅನುಭವ ನೂರು ನಾ ನೋಡಿದೆ ನಡೆಯುವ ಮುಂದಿನ ದಾರಿ ಮರೆ ಎಂದಿದೆ ನಡೆ ಎಂದಿದೆ ಗುರಿ ತೋರಿದೆ ಯಾವ ಹೂವು ಯಾರ ಮುಡಿಗೊ ಅವನ ಆಟದೀ ಚೈತ್ರ ಬಂದು ಹೋಯಿತಮ್ಮ ನನ್ನ ತೋಟದೀ ತಂತಿ ಹರಿದ ವೀಣೆಯಲ್ಲಿ ಶೃತಿಯು ತಂದಿತು ನುಡಿಸುವವನು ಸ್ವರವ ಬೆರಸಿ ಸಾಟಿ ಕಾಣೆನು ಬಾಳಲಿ ಪಡೆದದು ಏನೋ ಅರಿಯದೆ ಕಳೆದುದು ಏನೋ ಕಾಣದ ಕೈಗಳ ಸ್ಪರ್ಶ ಮುಂದೆ ತರುವುದು ಏನೋ ಹೃದಯದಿ ಪ್ರೇಮ ತರಂಗ ನೀ ಮೀಟಿದೆ ಬದುಕಿಗೆ ನೂತನ ಅರ್ಥ ನೀ ನೀಡಿದೆ ಸುಮಧುರ ಅನುಭವ ನೂರು ನಾ ನೋಡಿದೆ ನಡೆಯುವ ಮುಂದಿನ ದಾರಿ ಮರೆ ಎಂದಿದೆ ನಡೆ ಎಂದಿದೆ ಗುರಿ ತೋರಿದೆ. ------- KP
Lyrics powered by www.musixmatch.com
instagramSharePathic_arrow_out