Crédits
INTERPRÉTATION
Hemanth
Voix principales
COMPOSITION ET PAROLES
Sadhu Kokila
Composition
Yogaraj Bhat
Paroles/Composition
Paroles
ಅರಿಯದಂತೆ ಕಳೆದುಹೋದ
ಆ ನಲುಮೆಯ ಕ್ಷಣಗಳ
ಮರಳಿ ಕೊಡುವೆಯಾ ಗೆಳತಿ?
ತಿರುಗಿ ಬರುವೆಯಾ?
ಮುಗಿಯದ ಕವಿತೆ ನೀನು
ಮರೆಯದ ಹಾಡು ನೀನು
ಸ್ವಪ್ನದ ಸೆರೆಮನೆಗೆ
ತೆರಳಿದೆ ಒಲವಿಂದು
ನಗುವ ಕಂಗಳಲಿ
ಮಿಂಚಿದೆ ಹನಿಯೊಂದು
ಅರಿಯಂದಂತೆ ಕಳೆದುಹೋದ
ಆ ನಲುಮೆಯ ಕ್ಷಣಗಳ
ಮರಳಿ ಕೊಡುವೆಯಾ ಗೆಳತಿ?
ತಿರುಗಿ ಬರುವೆಯಾ?
ಮುಗಿಯದ ಕವಿತೆ ನೀನು
ಮರೆಯದ ಹಾಡು ನೀನು
ಮುಗಿಯದ ಕವಿತೆ ನೀನು
ಮರೆಯದ ಹಾಡು ನೀನು
ಪದಗಳ ಬರೆಯದೆಲೆ
ಪತ್ರವು ಮುಗಿದಾಗ
ನೆನಪಿನ ಜಾತ್ರೆಯಲಿ
ತಬ್ಬಲಿ ಅನುರಾಗ
ಎದೆಯ ಗೂಡಿನಲ್ಲಿ
ಬೆಳಗುವ ಪ್ರೇಮದ ಹಣತೆಯ ಸುತ್ತ
ಕಪ್ಪು ಕವಿದಿದೆ
ಕುರುಡು ಕನಸು ಮಲಗಿದೆ
ಕಪ್ಪು ಕವಿದಿದೆ
ಕುರುಡು ಕನಸು ಮಲಗಿದೆ
Written by: Sadhu Kokila, Yogaraj Bhat