Paroles

ನೀನೇ ರಾಮ ನೀನೇ ಶ್ಯಾಮ ನೀನೇ ಅಲ್ಲಾ ನೀನೇ ಯೇಸು ನೀನೇ ಕರ್ಮ ನೀನೇ ಧರ್ಮ ನೀನೇ ಮರ್ಮ ನೀನೇ ಪ್ರೇಮ ನಿಮ್ಮ ಜೀವದ ಮಾಲೀಕ ನಾನು ನಿಮ್ಮ ಪಾಲಿನ ಸೇವಕ ನಾನು ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ ಕಣ ಕಣ ಕಣದೊಳಗೆ ಕುಳಿತಿರುವೆ (ಮುಕುಂದ ಮುರಾರೇ ಮುಕುಂದ ಮುರಾರೇ ಮುಕುಂದ ಮುರಾರೇ ಮುಕುಂದ ಮುರಾರೇ) ನೀನೇ ರಾಮ ನೀನೇ ಶ್ಯಾಮ ನೀನೇ ಅಲ್ಲಾ ನೀನೇ ಯೇಸು ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲ್ಲಿರುವೆ ನಾನು ಬೆಳೆಯ ನಡುವೆ ರೈತ ಬಸಿದ ಬೆವರಲ್ಲಿರುವೆ ನಾನು ಕೆಲಸ ನಿನದೆ ಫಲವು ನಿನದೆ ಛಲದ ಒಡೆಯ ನೀನು ಇದನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನು ಬಿಡು ಮತಗಳ ಜಗಳ ಇದೆ ಕೆಲಸವು ಬಹಳ ನನ್ನ ಒಲಿಸಲು ಮರುಳ ಇರೋ ಮಾರ್ಗವು ಸರಳ ನನ್ನ ಸೇರಲು ದಾರಿಯು ನೂರು ಅದಕೇತಕೆ ಈ ತಕರಾರು ಅಣು ಅಣು ಅಣು ಒಳಗೆ ಕುಳಿತಿರುವೆ (ಮುಕುಂದ ಮುರಾರೇ ಮುಕುಂದ ಮುರಾರೇ ಮುಕುಂದ ಮುರಾರೇ ಮುಕುಂದ ಮುರಾರೇ) (मौला मेरे मौला मेरे मौला मौला मौला मेरे मौला मेरे मौला मौला, अल्लाह) ಯುಗದ ಯುಗದ ಮೃಗದ ಖಗದ ಉಸಿರಲ್ಲಿರುವೆ ನಾನು ಕಡಲ ಅಲೆಯ ಮಳೆಯ ಹನಿಯ ಬರಮಾಡುವೆ ನಾನು ಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನು ನನಗು ನಿನಗು ನಡುವೆ ನೀನೆ ಗೋಡೆ ಕಟ್ಟಿದವನು ನಾ ಇರುವೆನು ಒಳಗೆ ನೀ ಹುಡುಕಿದೆ ಹೊರಗೆ ಬಿಚ್ಚು ಮದದ ಉಡುಗೆ ನಡೆ ಬೆಳಕಿನ ಕಡೆಗೆ ನಿಮ್ಮ ಜೀವದ ಮಾಲೀಕ ನಾನು ನಿಮ್ಮ ಪಾಲಿನ ಸೇವಕ ನಾನು ಕಣ ಕಣ ಕಣದೊಳಗೆ ನಾನಿರುವೆ (ಮುಕುಂದ ಮುರಾರೇ ಮುಕುಂದ ಮುರಾರೇ ಮುಕುಂದ ಮುರಾರೇ ಮುಕುಂದ ಮುರಾರೇ) ನೀನೇ ರಾಮ ನೀನೇ ಶ್ಯಾಮ ನೀನೇ ಅಲ್ಲಾ ನೀನೇ ಎಲ್ಲಾ
Writer(s): Arjun Janya Lyrics powered by www.musixmatch.com
instagramSharePathic_arrow_out