Paroles

ಕೃಷ್ಣಾ... ಓಹೋ ಕರುಣಾ ಸಿಂಧೂ ಹೌದಪ್ಪ ದೀನ ಬಂದು ಅಬಾಬಾ ಆಪತ್ ಬಾಂಧವ ಪಾಹಿಮಾಂ ಭೇಷ್ ಮೆಚ್ಕೋಬಿಟ್ಟೆ ಕಣ್ಣ್ಲಾ ಕೇಳು ಕೃಷ್ಣಾ ಹೂ ಹೇಳ್ ಲಾ ಪಾರ್ಥ ಕೇಳು ಕೃಷ್ಣಾ ಹೇಳು ಪಾರ್ಥ ಕೇಳು ಕೃಷ್ಣಾ ಹೇಳು ಪಾರ್ಥ ಒಳಗೊಳಗೇ ಭಯವೈತೈಯ್ಯ ನಾನಿವ್ನಿ ಸುಮ್ಮನಿಲ್ಲಯಾ ಕೇಳು ಕೃಷ್ಣಾ ಹೇಳು ಪಾರ್ಥ ಕೇಳು ಕೃಷ್ಣಾ ಹೇಳು ಪಾರ್ಥ ಈ ಕರ್ಮ ನನಗ್ಯಾಕಯ್ಯಾ ಧರ್ಮಾನ ಕಾಪಾಡಯ್ಯಾ ಎಲ್ಲಾರು ನನ್ನವ್ರೆ ಜೊತೆಗಾರರೆ ಸಮರದಲಿ ಸಂಬಂಧ ಏಕೋ ದೊರೆ ಕೂಡು ನೀ ಬಾಣವಾ ಆಗದೋ ಮಾಧವ ತಡಿ ಕೃಷ್ಣ ನಡಿ ಪಾರ್ಥ ತಡಿ ಕೃಷ್ಣ ನಡಿ ಪಾರ್ಥ ಸ್ನೇಹಿತರು ಅವರಯ್ಯಾ ಮರಣವಿದು ಅನಿವಾರ್ಯ ಭಗವಂತ ಕೃಪೆ ತೋರಯ್ಯಾ ನೀನಿಲ್ಲಿ ಕ್ಷತ್ರಿಯಾ ನೀ ಕೂಡ ಕ್ಷಣವಯ್ಯಾ ಪಾಂಡವನೇ ಬಿಡು ಬಯಕೆಯಾ ಏನೆಂದು ತಿಳಿತಿಲ್ಲಾ ಬಂಧವಿದು ಬಿಡುತಿಲ್ಲಾ ಕೃಷ್ಣಾ ಈ ಸಾವೂ ನೋವೆತಕೋ ಸಾವಂತೆ ನೋವಂತೆ ಆತ್ಮಕ್ಕೆ ಏನಂತೆ ಪ್ರತಿ ಮರಣ ಹೊಸ ಜನನಕೋ ಕೊಲ್ಲುವುದು ಬೇಡಯ್ಯಾ ನನಗಿರಲಿ ಅಪಜಯ ಸೈನಿಕನು ನೀನಯ್ಯಾ ಕರ್ತವ್ಯ ಮರೆತೆಯಾ ನನಗ್ಯಾಕೆ ಬೇಕಯ್ಯಾ ಈ ರಾಜ್ಯ ವೈಭೋಗ ವೈರಾಗಿ ನೀನಾದ್ರೆ ಏನಯ್ಯಾ ಉಪಯೋಗ ನರಕದಂತೆ ಕಾಣತೈತೆ ನಾ ನಿಂತ ಜಗವೆಲ್ಲಾ ಜಗವೆಲ್ಲ ನನ್ನಲ್ಲೇ ಆ ಭಯವು ಬೇಕಿಲ್ಲ ಬರಲಾರೆ ನಾನು ದಯ ತೋರು ಪ್ರಭುವೇ ಇರಲಾರೆ ನಾನು ಶರಣಾಗು ನೀನು ಬಿಡು ಬೇರೆ ಎಲ್ಲವನು ಶರಣಾಗು ನೀನು ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ
Writer(s): Vasuki Vaibhav, Satya Prakash D Lyrics powered by www.musixmatch.com
instagramSharePathic_arrow_out