Video musicale

Crediti

PERFORMING ARTISTS
Hariharan
Hariharan
Performer
Anitha
Anitha
Performer
COMPOSITION & LYRICS
Manikanth Kadri
Manikanth Kadri
Composer
Jayanth Kaykini
Jayanth Kaykini
Songwriter

Testi

ಹಾಗೆಲ್ಲಾ ನೀ ನೋಡಬೇಡಾ. ಹೀಗೆಲ್ಲ ನೀ ಕಾಡಬೇಡಾ. ಈ ಮೌನ ಮಾತಡುವಾಗ ಮೆಲ್ಲಗೆ. ಏನೇನು ನೀ ಹೇಳಬೇಡಾ. ಇನ್ನೇನು ನೀ ಕೇಳಬೇಡಾ. ಈ ಸ್ವಪ್ನ ಪಾಲಾಗುವಾಗ ಮೆಲ್ಲಗೆ. ಹಾಡಲ್ಲಿ ಸಾಲಂತೆ ನೀನು ಇರುವಾಗ ನನ್ನೊಂದಿಗೆ. ನಾನಿನ್ನು ಹಾಡೋದು ಯಾರಿಗೆ? ಕಣ್ಣಲ್ಲಿ ನೀರಂತೆ ನೀನು ಇರುವಾಗ ನನ್ನೊಂದಿಗೆ. ನಾ ನಿಂತು ನೋಡೋದು ಯಾರಿಗೆ? ಬೇರೇನೆ ಭಾವ ಅಂದ ಮಾತಿಗೆ. ನೂರಾರು ರಾಗ ಮೂಕ ಪ್ರೀತಿಗೆ. ಇನ್ನೇಕೆ ದೂರು ಮಾತಾಡು ಚೂರು. ಎಲೆಯಲ್ಲಿ ಹೂವುಂತೆ ನೀನು ಇರುವಾಗ ನನ್ನೊಂದಿಗೆ ಮುಂಜಾವು ಕಾಯೋದು ಯಾರಿಗೆ? ಓಲೆಯಲ್ಲಿ ಕಾವಂತೆ ನೀನು ಇರುವಾಗ ನನ್ನೊಂದಿಗೆ. ಈ ಜೀವಾ ಬೇಯೋದು ಯಾರಿಗೆ? ಈ ದಾರಿಯಲ್ಲಿ ನೆನಪೆ ಸೇತುವೆ. ಏಕಾಂಗಿಯಾಗಿ ಹೇಗೆ ದಾಟುವೆ? ದೂರಾಗೋ ಮುನ್ನಾ ನೀ ನೋಡು. ನನ್ನಾ. ಮನಸಲ್ಲಿ ಮಳೆಯಂತೆ ನೀನು ಇರುವಾಗ ನನ್ನೊಂದಿಗೆ. ಚಂದ್ರಮ ಕಾಣೋದು ಯಾರಿಗೆ? ನೀರಲ್ಲಿ ಅಲೆಯಂತೆ ನೀನು ಇರುವಾಗ ನನ್ನೊಂದಿಗೆ. ತಂಗಾಳಿ ಬಿಸೋದು ಯಾರಿಗೆ? ಹಾಗೆಲ್ಲಾ ನೀ ನೋಡಬೇಡಾ. ಹೀಗೆಲ್ಲ ನೀ ಕಾಡಬೆಡಾ. ಈ ಮೌನ ಮಾತಡುವಾಗ ಮೆಲ್ಲಗೆ.
Writer(s): Jayanth Kaikini, Mani Kanth Kadri Lyrics powered by www.musixmatch.com
instagramSharePathic_arrow_out