Video musicale

Crediti

PERFORMING ARTISTS
Sreya Jayadeep
Sreya Jayadeep
Performer
Shivaraj Kumar
Shivaraj Kumar
Actor
COMPOSITION & LYRICS
4 Music
Composer
Nagendra Prasad
Nagendra Prasad
Lyrics

Testi

ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ ಅವನ ಪ್ರೀತಿ ಬೇಕೆನಗೆ ಮೀನುಗೋ ಚುಕ್ಕಿಗಳನ್ನು ತರುವ ಅಪ್ಪನು ಬೇಡ ಅವನ ಸನಿಹ ಬೇಕೆನಗೆ ಕಲ್ಪನೆಯ ಕುದುರೆಗಳು ಕ್ಷಣದಲಿ ಮಾಯಾ ಹಗಲಿನಲಿ ತಾರೆಗಳು ಹೇಳದೆ ಮಾಯಾ ಅಂತ ಕುದುರೆ ತಾರೆ ಇಲ್ಲ ನಂಗೆಯಾಕಪ್ಪಾ ಇಂದು ನನ್ನ ಜೊತೆ ಇರೋ ಅಪ್ಪ ಬೇಕಪ್ಪಾ ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ ಅವನ ಪ್ರೀತಿ ಬೇಕೆನಗೆ ಅವನ ಸನಿಹ ಬೇಕೆನಗೆ ಸಾಲಕ್ಕೆ ಸಿಗುವಂತ ಇಂದ್ರನ ಆನೆಯು ನನಗೆ ಬೇಕಿಲ್ಲಾ ನನ್ನೊಡನೆ ನಗುತಾ ಮುದ್ದಿಸಿ ಆಡುವ ಅಪ್ಪಾ ಬೇಕಪ್ಪಾ ಹಗಲು ಬಂದರೆ ಮಾಸುವ ಹುಣ್ಣಿಮೆ ನನಗೆ ಬೇಕಿಲ್ಲಾ ಅದಕ್ಕಿಂತ ಹೆಚ್ಚಿನ ತಂಪನ್ನು ನೀಡುವ ಅಪ್ಪ ಬೇಕಪ್ಪಾ ಬೇಡವೇ ಬೇಡ ಕಾಮನಬಿಲ್ಲು ಮಳೆಯು ಸುರಿದರೆ ಅದರ ಬಣ್ಣವು ಕರಗದೇ ಎಂದೆಂದು ಕರಗದ ನಿನ್ನಾ ಒಲುಮೆ ಬೇಕಿದೇ ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ ಅವನ ಪ್ರೀತಿ ಬೇಕೆನಗೆ ಕಣ್ಣಿಗೆ ಕಾಣದ ಗಂಧರ್ವ ಲೋಕದ ಅಪ್ಪನು ಬಲು ದೂರ ಇಂದಲ್ಲ ನಾಳೆ ಬರುತಾನೆ ಎನ್ನುವ ಆಸೆ ಬಲು ಭಾರ ನನ್ನ ಆಸೆಗಳ ಪೂರೈಸೋ ಅಪ್ಪನು ಇದ್ದರೆ ಸಾಕಿನ್ನು ಮುದ್ದು ಮಾಡಿ ನನ್ನ ಪ್ರೀತಿ ಮಾಡೊ ಅಪ್ಪ ಬೇಕು ನನಗಿನ್ನೂ ನೆರಳಿನ ಹಾಗೆ ಜೊತೆ ಇರಬೇಕು ಲಾಲನೆ ಪಾಲನೆಗೆ ಬೇರೆ ಜೀವವು ಇನ್ನೇತಕೇ ಸುಂದರ ಸುಳ್ಳುಗಳು ಸಾಕು ಎಲ್ಲಿದೆ ಜೀವಂತಿಕೆ
Writer(s): Nagendra Prasad, 4 Musics Lyrics powered by www.musixmatch.com
instagramSharePathic_arrow_out