クレジット
PERFORMING ARTISTS
Rajesh
Performer
COMPOSITION & LYRICS
R P Patnayak
Composer
Nagendra Prasad
Songwriter
歌詞
ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ
ಭೂಮಿಗೆ ತಂದು ಎಸೆದ
ಹಂಚಲು ಹೋಗಿ ಬೇಸರವಾಗಿ
ಹಂಚಿಕೋ ಹೋಗಿ ಎಂದ
ಕೊನೆಗೂ ಸಿಗದೇ ಪ್ರೀತಿ
(ಬದುಕು ರಣಭೂಮಿ
ಜಯಿಸಲಿ ಪ್ರೇಮಿ
ಬದುಕು ರಣಭೂಮಿ
ಜಯಿಸಲಿ ಪ್ರೇಮಿ)
ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ
ಭೂಮಿಗೆ ತಂದು ಎಸೆದ
ಅವನ ಅವಳ ಬದುಕು ಮುಗಿದರೂನು
ಅವರ ಪ್ರೀತಿ ಗುರುತು ಸಾಯದಿನ್ನು
ಬಿರುಗಾಳಿಗೆ ಸೂರ್ಯ ಹಾರಿ ಹೋದರು
ಪ್ರೀತಿಯು ಹಾರದು
ಈ ಜಗದ ಎಲ್ಲ ಗಡಿಯಾರ ನಿಂತರು
ಪ್ರೀತಿಯು ನಿಲ್ಲದು
(ಬದುಕು ಸುಡುಭೂಮಿ
ನಡುಗನು ಪ್ರೇಮಿ
ಬದುಕು ಸುಡುಭೂಮಿ
ನಡುಗನು ಪ್ರೇಮಿ)
ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ
ಭೂಮಿಗೆ ತಂದು ಎಸೆದ
ಹಂಚಲು ಹೋಗಿ ಬೇಸರವಾಗಿ
ಹಂಚಿಕೋ ಹೋಗಿ ಎಂದ
ಯಮನು ಶರಣು ಎನುವ ಪ್ರೀತಿ ಮುಂದೆ
ಧನಿಕ ತಿರುಕ ಪ್ರೀತಿ ಮುಂದೆ ಒಂದೆ
ಹಳೆ ಗಾದೆ ವೇದಾಂತ ಬೂದಿಯಾದರು
ಪ್ರೀತಿಯು ಸಾಯದು
ತಿರುಗಾಡುವ ಭೂಮಿಯು ನಿಂತೆ ಹೋದರು
ಪ್ರೀತಿಯು ನಿಲ್ಲದು
(ಬದುಕು ಮರುಭೂಮಿ
ಮಳೆ ಹನಿ ಪ್ರೇಮಿ
ಬದುಕು ಮರುಭೂಮಿ
ಮಳೆ ಹನಿ ಪ್ರೇಮಿ)
Written by: Nagendra Prasad, R P Patnayak

