歌詞

ಒಂದು ಮುಂಜಾನೆ ಹಂಗೆ ಸುಮ್ಮನೆ ನಾವು ಹೋಗುವ ಬಾರೆ ದಾರಿ ಇದ್ದಷ್ಟು ದೂರ ಹೋಗುವ ಬೇಡ ಅನ್ನೋರು ಯಾರೇ ನನ್ನ ತಾರೆ ನಿನ್ನ ಮೇಲೆ ಗೋಲಿ ಆಡ್ತಿದ್ದ ವಯಸ್ಸಲ್ಲೇ ಪ್ರೀತಿ ಶುರುವಾಗೋಯ್ತೆ ನೀ ಕಾಣೋ ಎಲ್ಲ ಕನಸ ಮಾಡುವೆನು ನಾನು ನನಸ ದಾಸ ನಿನಗೆ ಖಾಸ ಒಂದು ಮುಂಜಾನೆ ಹಂಗೆ ಸುಮ್ಮನೆ ನಾವು ಹೋಗುವ ಬಾರೆ ದಾರಿ ಇದ್ದಷ್ಟು ದೂರ ಹೋಗುವ ಬೇಡ ಅನ್ನೋರು ಯಾರೇ ಯಾರಿಲ್ಲದ ಊರಲ್ಲಿ ಒಂದು ನದಿ ದಂಡೇಲಿ ನಾವೊಂದು ಪುಟ್ಟ ಮನೆ ಮಾಡಿ ಬೆಳದಿಂಗಳ ರಾತ್ರೀಲಿ ನಕ್ಷತ್ರದ ಹೊದಿಕೇಲಿ ನಾನಿರುವೆ ನಿನ್ನ ಮಡಿಲಲ್ಲಿ ನಿನಗೆ ನಾನು, ನನಗೆ ನೀನು ನನ್ನ ಜಗದ ದೊರೆಯು ನೀನು ರಾಣಿ. ಬಾರೆ ನೀನಿರದೇ ಒಂದು ನಿಮಿಷ ಇರಲಾರ ನಿನ್ನ ಅರಸ ದಾಸ ನಿನಗೆ ಖಾಸ ಒಂದು ಮುಂಜಾನೆ ಹಂಗೆ ಸುಮ್ಮನೆ ನಾವು ಹೋಗುವ ಬಾರೆ ದಾರಿ ಇದ್ದಷ್ಟು ದೂರ ಹೋಗುವ ಬೇಡ ಅನ್ನೋರು ಯಾರೇ ಸಿಹಿಮುತ್ತಿನ ಕಂದಾಯ ಪ್ರತಿನಿತ್ಯವೂ ಸಂದಾಯ ಮಾಡೋದು ಮರಿಬೇಡ ಇಂದು ಒಂದೇ ಕಣೆ ಒತ್ತಾಯ ನಿನಗೆ ಹಣೆ ಬಿಂದಿಯ ದಿನ ನಿತ್ಯ ಇಡೋ ಕೆಲಸ ನಂದು ನನದೆ ಕಣ್ಣು ತಗಲೋ ಭಯವೇ ಕಣ್ಣು ಮುಚ್ಚು ಅಲ್ಲೂ ಸಿಗುವೆ ರಾಣಿ... ಬಾರೆ ಕಾವೇರಿ ಕಾಯೋ ಕೆಲಸ ಮಾಡುವೆನು ಎಲ್ಲದಿವಸ ದಾಸ ನಿನಗೆ ಖಾಸ
Writer(s): V Harikrishna Lyrics powered by www.musixmatch.com
instagramSharePathic_arrow_out