뮤직 비디오

크레딧

실연 아티스트
Sonu Nigam
Sonu Nigam
실연자
작곡 및 작사
Micky J Meyar
Micky J Meyar
작곡가
Kaviraj
Kaviraj
송라이터

가사

ಅಳು ಬಂದರೂ ಅಳ ಬಾರದು ಮನಸೇ ಇರು ತಡೆದು ಪ್ರತಿ ಪ್ರೀತಿಗೂ ಗೆಲುವಾಗದು ನಿಜವೇ ಇದೂ ಇದು ಯಾರನು ದೂರಲಿ ನನ್ನದೇ ತಪ್ಪಿರುವಾಗ ನೋಡುತಾ ನಿನ್ನಲಿ ಹೇಗೆ ಈಗ ಮರೆಯುವುದು ನಿನ್ನ ಮರೆಯುವುದು ಈ ಜನುಮದಲಿ ಇದು ಸಾಧ್ಯಾನಾ ಸಿಗದವರ ಹಿತ ಬಯಸುವುದೇ ಶುಭ ಹರಸುವುದೇ ನಿಜ ಪ್ರೀತಿನಾ ಯಾಕೆ ಮಾಡಿಕೊಂಡೆನಾ ಇಂಥದೊಂದು ಆತ್ಮ ವಂಚನೆ ನನ್ನ ಸ್ವಪ್ನ ಲೋಕಕೆ ನಾನೇ ಬೆಂಕಿ ಹಚ್ಚಿಕುಂತೆನೇ ಬರಿ ಮರಳಲ್ಲಿ ಗೀಚಿದ ಹೆಸರಾ ಅಲೆ ಅಳಸಿದೆ ಒಮ್ಮೆಲೆ ಈಗ ಅಸಹಾಯಕ ವೀಕ್ಷಕ ನಾನು ಏನು ಮಾಡಲೀ ಮರೆಯುವುದು ನಿನ್ನ ಮರೆಯುವುದು ಈ ಜನುಮದಲಿ ಇದು ಸಾಧ್ಯಾನಾ ಸಿಗದವರ ಹಿತ ಬಯಸುವುದೇ ಶುಭ ಹರಸುವುದೇ ನಿಜ ಪ್ರೀತಿನಾ ಇನ್ನು ಮುಂದೆ ಭೇಟಿಗೆ ಇಲ್ಲ ಒಂದೇ ಒಂದು ಕಾರಣ ಮಾತು ಬಂದು ಮೂಕನೇ ಆಗಿ ಹೋದೆ ಯಾಕೆ ಈ ದಿನ ಬಲು ಸನಿಹದ ಸ್ನೇಹಿತೆ ನೀನು ಬಲು ದೂರಕೆ ಸಾಗುವೆ ಏನು ನೀನಿರದಿರೆ ಬದುಕುವನೇನು ನಾನು ಕಾಣೆನು ಮರೆಯುವುದು ನಿನ್ನ ಮರೆಯುವುದು ಈ ಜನುಮದಲಿ ಇದು ಸಾಧ್ಯಾನಾ ಸಿಗದವರ ಹಿತ ಬಯಸುವುದೇ ಶುಭ ಹರಸುವುದೇ ನಿಜ ಪ್ರೀತಿನಾ
Writer(s): Kaviraj, Jain Vishal Lalit Lyrics powered by www.musixmatch.com
instagramSharePathic_arrow_out