Songteksten

ನೀಚ ಸುಳ್ಳು ಸುತ್ತೋ ನಾಲಿಗೆ ನಿನ್ನ ಸೀಳುವ ರೋಷ ಉಕ್ಕಿದೆ ಕಂಡ ಕಂಡಲೆಲ್ಲ ಖಂಡಿಸೋ ನಿನ್ನ ಕಂಡರೆ ರಕ್ತ ಕುದಿತಿದೆ ನೀಚ ಸುಳ್ಳು ಸುತ್ತೋ ನಾಲಿಗೆ ನಿನ್ನ ಸೀಳುವ ರೋಷ ಉಕ್ಕಿದೆ ಕಂಡ ಕಂಡಲೆಲ್ಲ ಖಂಡಿಸೋ ನಿನ್ನ ಕಂಡರೆ ರಕ್ತ ಕುದಿತಿದೆ ಸುಳ್ಳೊಂದು ಭೂದಿಯಲಿ ಮುಚ್ಚಿರುವ ಕೆಂಡದಂತೆ ಎಲ್ಲ ಹತ್ತಿ ಉರಿದ ಮೇಲೂ ಹೊಗೆಯಾಗೋ ಆಸೆಯಂತೆ ಹದ್ದು ಮೀರಿ ಮಾತಾಡೋ ಮನುಜನಲ್ಲಿ ಮನಸಿಲ್ಲ ಸಾವು ಸೆರೆಗೆ ಸಿಕ್ಕಾಗ ನಿನ್ನ ನೆರಳ ಉಳಿಸೊಲ್ಲ ಕಟ್ಟು ಕಥೆಗೆ ಕಿವಿಕೊಡುವ ಕೀಚಕರ ಕಸರತ್ತು ಸಾವಿನಲೂ ಸರಿ ತಪ್ಪು ಹುಡುಕಾಡಿ ಬಿಡೋ ಹೊತ್ತು ಬದುಕಿ ಬಾಳುವವರನು ಕಂಡರೆ ಕಿಡಿ ಗಿಚ್ಚು ಸತ್ತು ಹೋದ ಮೇಲೂ ಬಿಡದು ನಿಮ್ಮ ಈ ಒಳ ಸಂಚು ಇಂಥ ಜನರ ಉಳಿಸಬೇಡ ಕರ್ಕೊಂಡ್ಹೋಗೋ ಭಗವಂತ ನೆಪ ಹೇಳೋ ನೆಪದಲ್ಲಿ ಯಾರು ಇಲ್ಲ ಜೀವಂತ (ನೀಚ ಸುಳ್ಳು ಸುತ್ತೋ ನಾಲಿಗೆ ನಿನ್ನ ಸೀಳುವ ರೋಷ ಉಕ್ಕಿದೆ ಕಂಡ ಕಂಡಲೆಲ್ಲ ಖಂಡಿಸೋ ನಿನ್ನ ಕಂಡರೆ ರಕ್ತ ಕುದಿತಿದೆ) ಉರಿವವರು ಉರಿಯುತ್ತಾ ಉರಿದುರಿದು ಹೋಗುವರು ಕುದಿವವರು ಕುದಿಯುತ್ತಾ ಆವಿಯಾಗಿ ತೀರುವರು ಮಾಡಿದವರ ಪಾಪಗಳು ಆಡಿದವರ ಬಾಯಲ್ಲಿ ಬತ್ತಿ ಇತ್ತ ಕ್ಷಣದಲ್ಲೇ ಬಂತು ನಿನ್ನ ಬುಡದಲ್ಲೇ ಕಾದಿದೆ ನೋಡು ನಿನ್ಹಿಂದೆ ಹೆಗಲೇರಿ ನಿನ್ನ ಬಲೆಗೆ ನೀನೇ ಸುತ್ತಿ ಸಿಲುಕಿಕೊಳ್ಳುವ ಭ್ರಾಂತಿ ಆಡಿದಂಥ ಆಟಕೆಲ್ಲಾ ಲೆಕ್ಕ ಕೊಡಲೇ ಬೇಕು ಪೂರ್ತಿ ಬಾ ಹೆದರಿಸು ಬಾ (ಬಾ ಬಾ ಬಾ ಬಾ) (ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ ಬಾ) ಕಡುಕ ಕಾಡು ಪಾಪಿ ಕಟ್ಟಿರುವ ಕಡುಕೋಟೆ ಕೆಡವುವೆನು ಬಾ (ಬಾ ಬಾ ಬಾ ಬಾ) ಸೆಣೆಸಲು ಬಾ (ಬಾ ಬಾ ಬಾ ಬಾ)
Writer(s): Ajaneesh Loknath B, Dhananjay Ranjan Lyrics powered by www.musixmatch.com
instagramSharePathic_arrow_out