Kredyty

PERFORMING ARTISTS
Crazy CL
Crazy CL
Performer
COMPOSITION & LYRICS
Crazy CL
Crazy CL
Songwriter
PRODUCTION & ENGINEERING
Nithinkumar
Nithinkumar
Mixing Engineer

Tekst Utworu

ಬಡಪಾಯಿಯಾದರೂ ಆಸೆಗಳು ನನಗೆ ನೂರೆಂಟು
ಇದರ ಜೊತೆ ಜೀವನದಲ್ಲಿ ತುಂಬಾ ಕಷ್ಟ ನೋವುಂಟು
ಇದು ಮುಗಿಯದ ಕಥೆ ಹೇಳೋಕ್ಕೆ ಇದೇ ನಿಮಗೆಲ್ಲಾ ಇನ್ನು ಬಹಳಷ್ಟು
ದಯವಿಟ್ಟು ಕಿವಿ ಕೊಟ್ಟು ಕೇಳಿ ನಾ ಕಾಣ್ತಿರೋ ಕನಸಲ್ಲಿ ನಿಮಗೂ ಕೂಡ ಪಾಲುಂಟು
ಬಡಪಾಯಿಯಾದರೂ ಆಸೆಗಳು ನನಗೆ ನೂರೆಂಟು
ಇದರ ಜೊತೆ ಜೀವನದಲ್ಲಿ ತುಂಬಾ ಕಷ್ಟ ನೋವುಂಟು
ಇದು ಮುಗಿಯದ ಕಥೆ ಹೇಳೋಕ್ಕೆ ಇದೇ ನಿಮಗೆಲ್ಲಾ ಇನ್ನು ಬಹಳಷ್ಟು
ದಯವಿಟ್ಟು ಕಿವಿ ಕೊಟ್ಟು ಕೇಳಿ ನಾ ಕಾಣ್ತಿರೋ ಕನಸಲ್ಲಿ ನಿಮಗೂ ಕೂಡ ಪಾಲುಂಟು
ಅದೆಷ್ಟೇ ಆಸೆ ಪಟ್ಟರು ನಮಗೆಲ್ಲ ಅದು ಬರಿ ಹಗಲುಗನಸು‌
Atleast ಇರೋ ಚಿಕ್ಕ ಪುಟ್ಟ ಆಸೆಗಳನ್ನು ಮಾಡಬೇಕು ನನಸು
ನಮ್ ಕೈಯಲ್ಲಿ ಆಗಿಲ್ಲ ಅಂದ್ರು ಆದಷ್ಟು ಮಾಡ್ತೀವಿ
ನಮ್ಮದ್ದೆಲ್ಲಾ ಒಂತರಾ ಧಾರಾಳ ಮನಸ್ಸು
ಜನರು ಕೊಡುವ ಆಶೀರ್ವಾದ ಮಾತು ಸಾಕು ನನಗೆ
ಇನ್ನು ನೂರು ಕಾಲ ಚೆನ್ನಾಗಿ ಬದುಕು.
ಒಂದೊಳ್ಳೆ Bike ಒಂದೊಳ್ಳೆ Car
ಒಂದು ಚಿಕ್ಕ ಅರಮನೆ ಸಾಕು
ಕೈತುಂಬಾ Cash ನೆಮ್ಮದಿ Life
ಅಮ್ಮನ ಹಾಗೆ Super Wife ಸಿಗಬೇಕು
ಕತ್ತಲಿ Gold, Crazy Shoes
ಒಮ್ಮೆಯಾದರೂ Rich Clothes ಹಾಕೋಬೇಕು
Quality Time ಇರೋದೊಂದೆ Life
ಇಷ್ಟಪಟ್ಟ ಹಾಗೆ ಬಾಳಬೇಕು
ನಗುತ ಬಾಳುವೆ ಬೇಡ ನನಗೆ ಯಾರದು ಸಲಹೆ
Flex ಮಾಡೋಕ್ಕೆ ನನಗೂ ಬರುತ್ತೆ ಮಗುವೆ
ಆಸೆಗಳಿಗೆ ಬರವೆ ಮನ್ಸಲ್ಲಿ ಭಾರವೇ
ಆದರೂ ಇಲ್ಲ ನನಗೆ ಜ್ಞಾನದ ಕೊರತೆ
ಸಾಲವು ಮಾಡದೆ ಮಾನವು ಹೋಗದೆ
ಸಂಬಂಧಿಕರ ಮುಂದೆ‌ ಗತ್ತಾಗಿ ಇರುವೆ
ಸಧ್ಯಕ್ಕೆ ಈ ಬಡಪಾಯಿ ಜೀವನಕ್ಕೆ
Middle Class ಆ ದೇವರ ಕೊಡುಗೆ
ಕಾರಣವಿಲ್ಲದೆ ಯಾವುದು ಆಗಲ್ಲ
ನೀ ಕಾಣುವ ಕನಸೆಲ್ಲ ಯಾವುದು ಸುಳ್ಳಲ್ಲ
ಸುಮ್ಮನೆ ಕುಳಿತರೆ ಏನನ್ನು ಆಗಲ್ಲ
Luck ಅಲ್ಲೇ ಎಲ್ಲಾ ಸಿಗೋ ಹಾಗಿದ್ರೆ
ಈ ಭೂಮಿ ಮೇಲೆ ಬಡವರೆ ಇರಲ್ಲ
ಮನಸ್ಸಿದ್ದರೆ ಮಾರ್ಗ ಅದನ್ನು ಮೀರಿದ್ದು ಏನಿಲ್ಲ
ಬಯಸಿದ್ದು ಸಿಕ್ಕಾಗ ನಿನ್ನ ಕಷ್ಟವೆಲ್ಲಾ
ಯಾವುದು ನಿನಗೆ Matter ಏ ಆಗಲ್ಲ
ಬಡಪಾಯಿಯಾದರೂ ಆಸೆಗಳು ನನಗೆ ನೂರೆಂಟು
ಇದರ ಜೊತೆ ಜೀವನದಲ್ಲಿ ತುಂಬಾ ಕಷ್ಟ ನೋವುಂಟು
ಇದು ಮುಗಿಯದ ಕಥೆ ಹೇಳೋಕ್ಕೆ ಇದೇ ನಿಮಗೆಲ್ಲಾ ಇನ್ನು ಬಹಳಷ್ಟು
ದಯವಿಟ್ಟು ಕಿವಿ ಕೊಟ್ಟು ಕೇಳಿ ನಾ ಕಾಣ್ತಿರೋ ಕನಸಲ್ಲಿ ನಿಮಗೂ ಕೂಡ ಪಾಲುಂಟು
ಬಡಪಾಯಿಯಾದರೂ ಆಸೆಗಳು ನನಗೆ ನೂರೆಂಟು
ಇದರ ಜೊತೆ ಜೀವನದಲ್ಲಿ ತುಂಬಾ ಕಷ್ಟ ನೋವುಂಟು
ಇದು ಮುಗಿಯದ ಕಥೆ ಹೇಳೋಕ್ಕೆ ಇದೇ ನಿಮಗೆಲ್ಲಾ ಇನ್ನು ಬಹಳಷ್ಟು
ದಯವಿಟ್ಟು ಕಿವಿ ಕೊಟ್ಟು ಕೇಳಿ ನಾ ಕಾಣ್ತಿರೋ ಕನಸಲ್ಲಿ ನಿಮಗೂ ಕೂಡ ಪಾಲುಂಟು
ಅತಿ ಆಸೆ ಪಟ್ಟರೆ ಅಮೃತ ಕೂಡ ವಿಷ ಆದರೆ ಕಷ್ಟಪಟ್ಟರೆ ಇಷ್ಟಪಟ್ಟಿದ್ದೆಲ್ಲ ಸಿದ್ದ
ಸಾವಿರ ಯುದ್ಧಕ್ಕಿಂತ ಮೊದಲು ನಿನ್ನನ್ನು ನೀನು ಗೆಲ್ಲು ಅಂತ ಹೇಳಿದ್ದಾರೆ ನಮ್ಮ ಬುದ್ಧ
ಸಾಕಷ್ಟು ಪಾಪ ಮಾಡಿ ನೀರಲ್ಲಿ ಮುಳುಗಿ ಎದ್ದರೆ ಆಗುತ್ತ ಮನಸ್ಸು ಶುದ್ದ
ಬೆನ್ನು ಹಿಂದೆ ಮಾತನಾಡುವವರ ಮುಂದೆ
ನನ್ನನ್ನು ನಾನು Prove ಮಾಡಬೇಕು
ಬೇಡ ಅಂತ ಬಿಟ್ಟು ಹೋದವರೆಲ್ಲ ಅಯ್ಯೋ ಯಾಕೆ ಇವನನ್ನು ಕಳಕೊಂಡೆ ಅಂತ Feel ಮಾಡಿಸಬೇಕು
ಕೈಯಲ್ಲಿ ಏನೂ ಆಗಲ್ಲ ಅಂತ ಹೇಳಿದವರೆಲ್ಲ ತಲೆ ಎತ್ತಿ ನೋಡು ಹಾಗೆ ಬೆಳೆದು ತೋರಿಸಬೇಕು
ಕಾಲು ಎಳೆಯುವವರ ಮುಂದೆ ಕುರ್ಚಿ
ಮೇಲೆ ಕುಂತು ರಾಜನಂತೆ ನಾನು ಮೆರೆದು ತೋರಿಸಬೇಕು
ಗಿಡವಾಗಿ ಬಗ್ಗದ್ದು ಮರವಾಗಿ ಬಾಗದು
ನೀನು ಅಂದುಕೊಂಡಂಗೆಲ್ಲಾ ಇಲ್ಲಿ ಯಾವುದು ಆಗದು
ಆಸೆ ಪಡುವಾಗ ನಿನಗೆ ಗೊತ್ತಿರಲೆಬೇಕು ಇಲ್ಲಿ ಯಾವುದೂ ಒಳ್ಳೆದು ಯಾವುದು ಕೆಟ್ಟದ್ದು
ಇಲ್ಲಿವರೆಗೂ ಆಟ ಆಡಿಕೊಂಡು ಸಾಕು ಸುಮ್ಮನೆ ಸಮಯ ಕಳೆದಿದ್ದು
ಮನುಷ್ಯನಿಗೆ ಆಸೆ ಇರಬೇಕು ಆಗಲೇ ಅವನು ಅನ್ಕೊಂಡಂಗೆ ಸಾಧಿಸೋಕೆ ಆಗೋದು
ನಾ ಹೇಳುವ ಒಂದೊಂದು ಪದದಲ್ಲೂ ಒಂದೊಂದು ಅರ್ಥವಿದೆ
ಬಿಡಿಸಿ ನೋಡು ಗೊತ್ತಾಗುತ್ತೆ ನನ್ನಂತ ಎಷ್ಟೋ ಜನರು ಪಡುತ್ತಿರುವ ಕಷ್ಟವಿದೆ
ಈ ಭೂಮಿ ಮೇಲೆ ಬದುಕಿದ ಎಲ್ಲಾ ಜೀವಕ್ಕೂ ಇಲ್ಲಿ ಮೃತ್ಯುವಿದೆ
ಇರೋದೊಂದೆ ಜೀವನ ನೀನ್ ಹೇಗೆ ಬದುಕ್ತೀಯ ಅನ್ನೋದು ನಿನ್ನ ಕೈಯಲ್ಲಿದೆ
ಬಡಪಾಯಿಯಾದರೂ ಆಸೆಗಳು ನನಗೆ ನೂರೆಂಟು
ಇದರ ಜೊತೆ ಜೀವನದಲ್ಲಿ ತುಂಬಾ ಕಷ್ಟ ನೋವುಂಟು
ಇದು ಮುಗಿಯದ ಕಥೆ ಹೇಳೋಕ್ಕೆ ಇದೇ ನಿಮಗೆಲ್ಲಾ ಇನ್ನು ಬಹಳಷ್ಟು
ದಯವಿಟ್ಟು ಕಿವಿ ಕೊಟ್ಟು ಕೇಳಿ ನಾ ಕಾಣ್ತಿರೋ ಕನಸಲ್ಲಿ ನಿಮಗೂ ಕೂಡ ಪಾಲುಂಟು
ಬಡಪಾಯಿಯಾದರೂ ಆಸೆಗಳು ನನಗೆ ನೂರೆಂಟು
ಇದರ ಜೊತೆ ಜೀವನದಲ್ಲಿ ತುಂಬಾ ಕಷ್ಟ ನೋವುಂಟು
ಇದು ಮುಗಿಯದ ಕಥೆ ಹೇಳೋಕ್ಕೆ ಇದೇ ನಿಮಗೆಲ್ಲಾ ಇನ್ನು ಬಹಳಷ್ಟು
ದಯವಿಟ್ಟು ಕಿವಿ ಕೊಟ್ಟು ಕೇಳಿ ನಾ ಕಾಣ್ತಿರೋ ಕನಸಲ್ಲಿ ನಿಮಗೂ ಕೂಡ ಪಾಲುಂಟು
Written by: Crazy CL
instagramSharePathic_arrow_out

Loading...