Letra

ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆ ಕನಸು ನಕ್ಷತ್ರ ಹುಡುಕುವುದು ಎಲ್ಲ ಕಡೆ ವಯಸು ತಿಳಿಯದಲೇ ಇಳಿಯುವುದು ಇಂಥಾ ಕಡೆ ತುಂಬಾ ನಡುಗುವೆನು ಕನ್ನಡಿಯ ಕಂಡು ನನ್ನಂಥ ನನಗೂ ಏನಾಯಿತಿಂದು ಈ ಒಂಟಿ ರಾತ್ರಿಯಲಿ ಅವಳ ಗುಂಗು ನನಗೇಕೋ ಕೇಳಿಸದು ನನ್ನ ಕೂಗು ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆ ಬಿಳಿಗೆಂಪು ತೋಳೆ ಅತಿ ತುಂಟ ಕಣ್ಣೆ ಮುದ್ದು ಮುಂಗುರುಳೇ ಕೆಂಪು ಕಿರುಬೆರಳೇ ನೆನಪಾಗದಿರಿ ಕಾಡಿಸದಿರಿ ಸುಮ್ಮನೆ ಬಿಡಿ ಅನುರಾಗದ ಈ ನೋವಿಗೆ ಏನ್ ಹೆಸರಿಡಲಿ ಅನುರಾಗದ ಈ ನೋವಿಗೆ ಹೆಸರೇನಿಡಲಿ ಎದೆಯೊಳಗಡೆ ಎದೆಯೊಂದಿಂದೆ ನೆನಪೊಳಗಡೆ ನೆನಪೊಂದಿದೆ ಈ ಒಂಟಿ ರಾತ್ರಿಯಲಿ ಅವಳ ಗುಂಗು ನನಗೇಕೋ ಕೇಳಿಸದು ನನ್ನ ಕೂಗು ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆ ಒಲವೆಂಬುದು ಮಳೆಗಾಲ ಬಾಯಾರಿದಂತೆ ಕಡು ಎಚ್ಚರದಲೇ ಹೃದಯ ಕಾಲ್ಜಾರಿದಂತೆ ಅವಳೆಂದರೆ ಮನದಾಳದ ಕೊನೆಯಾಸೆಯಂತೆ ಅವಳಿಲ್ಲದ ಕಡು ಹುಣ್ಣಿಮೆ ಸುಡುಗಾಡಿನಂತೆ ಅವಳೆಂದರೆ ಏನೆನ್ನಲಿ ಏನನದಿರಲಿ ಅವಳೆಂದರೆ ಏನೆನ್ನಲಿ ಏನನದಿರಲಿ ನೆನಪೆನ್ನಲೇ ನನದೆನ್ನಲೇ ಕನಸೆನ್ನಲೇ ನನಸೆನ್ನಲೇ ಈ ಒಂಟಿ ರಾತ್ರಿಯಲ್ಲಿ ಅವಳ ಗುಂಗು ನನಗೇಕೋ ಕೇಳಿಸದು ನನ್ನ ಕೂಗು ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆ
Writer(s): Yogaraj Bhat, V Harikrishna Lyrics powered by www.musixmatch.com
instagramSharePathic_arrow_out