Music Video

Music Video

Lyrics

ನುಡಿಸಲೇ ಹೊಸ ಮಾತಿನ ಪದನಿಸ
ಗಮನಿಸು ನಸುನಾಚಿಕೆ ನವರಸ
ಅತಿಯಾದ ಒಲವಲಿ ಮಿತಿಯ ಮೀರಿ ಬಿಡಲೇ
ತುಸು ಇತಿ ಮಿತಿ ಜೊತೆ ಇದೇಥರ ನನ್ನ ಸತಾಯಿಸು
ಗಮನಿಸು ನಸು ನಾಚಿಕೆ ನವರಸ (ನವರಸ)
ನುಡಿಸಲೇ ಹೊಸ ಮಾತಿನ ಪದನಿಸ
ವಿರಸ ಸರಸ ಎರಡೂ ಇದೆ ನನ್ನಲ್ಲಿ
ನಗೆಯಾ ನಡುವೆ ಹನಿಯೊಂದಿದೆ ಕಣ್ಣಲ್ಲಿ
ಅಳು ಬರಿಸುವ ಸಂಜೆಯಲಿ ರಮಿಸು ನಿನ್ನ ತೋಳಿನಲಿ
ಒಂದೂ ಮುತ್ತು ನೀಡದೇನೆ ತೋರು ಪ್ರೀತಿ ಬೇರೆ ರೀತಿ
ನುಡಿಸಲೇ ಹೊಸ ಮಾತಿನ ಪದನಿಸ
ಗಮನಿಸು ನಸು ನಾಚಿಕೆ ನವರಸ
ವಿರಹ ಎನುವ ಪದವೇ ನನಗಿನ್ನಿಲ್ಲ
ಸನಿಹ ಇರುವ ಕೆಲಸ ನನಗಿನ್ನೆಲ್ಲ
ಇದುವರೆಗಿನ ಏಕಾಂತ ಇಳಿಸಿರುವೆನು ಎದೆಯಿಂದ
ತೂಕ ಹಾಕಿ ನೋಡು ನೀನೆ ನನ್ನ ಪ್ರೀತಿ ತುಂಬಾ ಜಾಸ್ತಿ
ನುಡಿಸಲೇ ಹೊಸ ಮಾತಿನ ಪದನಿಸ
ಗಮನಿಸು ನಸು ನಾಚಿಕೆ ನವರಸ
ಅತಿಯಾದ ಒಲವಲಿ ಮಿತಿಯ ಮೀರಿ ಬಿಡಲೇ (ಬಿಡಲೇ)
ತುಸು ಇತಿ ಮಿತಿ ಜೊತೆ ಇದೇಥರ ನನ್ನ ಸತಾಯಿಸು
ಗಮನಿಸು (ಗಮನಿಸು)
ನಸು ನಾಚಿಕೆ ನವರಸ
ಹೇ ನುಡಿಸಲೇ ಹೊಸ ಮಾತಿನ ಪದನಿಸ
Written by: V. Harikrishna, Yogaraj Bhat
instagramSharePathic_arrow_out

Loading...