Lyrics

ನಾನ್ನೋಡಿದ್ಮಟ್ಟಿಗೇ ಎಲ್ಲಾರೂ friends ಆದ್ಮೇಲೆ lovers ಆಗ್ತಾರೆ ಆದ್ರೆ ನಾವು lovers ಆದ್ಮೇಲೆ friends ಆಗ್ತಾಯಿದಿವಿ ಒಂಥರಾ ಚೆನ್ನಾಗಿದ್ಯಲ್ಲ ಕಾಣ್ದೇ ಇರೋ ಖುಷಿ ಥರಾ ಮುಸ್ಸಂಜೆ ವೇಳೇಲಿ ಮುತ್ತಿಟ್ಟ ಉಸಿರಾಣೆ ಬಿಟ್ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಯಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ ಒಲವಿಲ್ಲದಾ ಒಡಲೆಲ್ಲಿದೆ ತಾಯಿಲ್ಲದಾ ಮಡಿಲೆಲ್ಲಿದೆ ಕಣ್ಣಿರಿಗೂ ಒಂದು ಕೊನೆಯ ಆಸೆ ಇದೆ ಕಣ್ಣಿಲ್ಲದ ಪ್ರೀತಿ ಕೇಳದೆ ಸಾಯುತ್ತಿದೆ ಮುಸ್ಸಂಜೆ ವೇಳೇಲಿ ಮುತ್ತಿಟ್ಟ ಉಸಿರಾಣೆ ಬಿಟ್ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಯಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ ನಿನ್ನಾಣೆಗೂ ಗೊತ್ತಿಲ್ಲ ಈ ಒಂಟಿಯ ಹೊಸ ಆಟ ಕಳೆದ್ಹೋಗೋ ಮುನ್ನ ಕೈ ಸೇರಬಾರದೆ ಮಾತಿಲ್ಲದೆ ಕುಂತಿದ್ದ ಆ ಮೌನದ ಮನವಿಯ ಏನೆಂದು ನೀನೊಮ್ಮೆ ಕೇಳಬಾರದೆ ಹಳೆದಾದ ಹೊಸ ನೋವು ದಿನ ಕಳೆಯಲು ಗೊತ್ತಿಲ್ಲ ಎದೆ ಗೂಡ ಗಡಿಯಾರ ನಿನ್ನಿಲ್ಲದೆ ನಡೆಯಲ್ಲ ಚೂರಗದಾ ಮನಸ್ಸೇಲ್ಲಿದೆ ಚೂರಾದರೂ ಮನಸೂ ಇದೆ ಆ ಮುತ್ತಿಗೂ ಹಣೆಯ ಮುಟ್ಟಿದ ನೆನಪು ಇದೆ ಹಣೆ ಮುಟ್ಟಿದ ತಪ್ಪಿಗೆ ಶಿಕ್ಷೆಯ ಕೇಳುತಿದೆ ಮುಸ್ಸಂಜೆ ವೇಳೇಲಿ ಮುತ್ತಿಟ್ಟ ಉಸಿರಾಣೆ ಬಿಟ್ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ ಎದೆ ಮೇಲೆ ಮಾಡಿದ್ದ ಆ ಆಣೆಗೂ ಭಾಷೆಗೂ ಬಲವಿದ್ದರೆ ಒಲವನ್ನು ಕಾಯಬಾರದೆ ಉಸಿರೋಗೋ ಮುಂಚೆನೇ ಹೃದಯಕ್ಕೆ ತಾಯಾಗಿ ಬಡಿತಗಳ ಕೈ ತುತ್ತ ನೀಡಬಾರದೆ ಹೆಸರನ್ನು ಬರೆದಿಟ್ಟ ಗೋಡೆಗೂ ಉಸಿರಿಲ್ಲ ಮನಸಾರೆ ಅಳಿಸೋಕೆ ಇದು ಗೊಂಬೆಯ ಕನಸಲ್ಲ ಈಗಾಗಲೇ ನೋವಾಗದೇ ದೂರಾಗಲು ಭಯವಾಗಿದೆ ನಿನ್ನೊಟ್ಟಿಗೆ ಕಳೆದ ನೆನಪೇ ಕಾಡುತ್ತಿದೆ ನನ್ನ ಕನಸಿನ ಪೆಟ್ಟಿಗೆ ಬೀಗವು ಬೀಳುತ್ತಿದೆ ಮುಸ್ಸಂಜೆ ವೇಳೇಲಿ ಮುತ್ತಿಟ್ಟ ಉಸಿರಾಣೆ ಬಿಟ್ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ
Writer(s): Arjun A P, Harikrishna V Lyrics powered by www.musixmatch.com
instagramSharePathic_arrow_out