album cover
Aaseya Bhava
825
Regional Indian
Aaseya Bhava was released on December 1, 1976 by Saregama as a part of the album Mangalya Bhagya (Original Motion Picture Soundtrack) - EP
album cover
Release DateDecember 1, 1976
LabelSaregama
Melodicness
Acousticness
Valence
Danceability
Energy
BPM127

Music Video

Music Video

Credits

PERFORMING ARTISTS
S.P. Balasubrahmanyam
S.P. Balasubrahmanyam
Performer
COMPOSITION & LYRICS
Rajan Nagendra
Rajan Nagendra
Composer
Vijaya Narasimha
Vijaya Narasimha
Songwriter

Lyrics

ಆಸೆಯ ಭಾವ
ಒಲವಿನ ಜೀವ
ಒಂದಾಗಿ ಬಂದಿದೆ
ಆಸೆಯ ಭಾವ, ಒಲವಿನ ಜೀವ, ಒಂದಾಗಿ ಬಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
ಆಸೆಯ ಭಾವ, ಒಲವಿನ ಜೀವ, ಒಂದಾಗಿ ಬಂದಿದೆ
ಕಾಮನ ಬಿಲ್ಲಿನಲಿ ಕಾಣದ ಕಾಂತಿಯನು
ಚಿಮ್ಮಿಸಿ ಹೊಮ್ಮುವಾ ಚೆಲುವಿಕೆ ಇಲ್ಲಿದೆ
ಪ್ರೇಮದ ಸೀಮೆಯಲಿ ಸೌರಭ ತುಂಬಿದಾ
ಬಾಡದ ಹೂವಿನ ಕಿರುನಗೆ ಚೆಲ್ಲಿದೆ
ಬಾಳಿನ ಭಾಗ್ಯ ನೌಕೆ ತೀರ ಸೆರೆ ತೇಲಿ ತೇಲಿದೆ
ಮನಸಿನ ರೂಪ ಮಂಗಳ ದೀಪ ಆನಂದ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
ಆಸೆಯ ಭಾವ, ಒಲವಿನ ಜೀವ, ಒಂದಾಗಿ ಬಂದಿದೆ
ಕಣ್ಣಿನ ಸನ್ನೆಯಲಿ ಕಾವ್ಯವ ನೀ ಬರೆದೆ
ಹೆಜ್ಜೆಯ ಭಾವಕೆ ಹಂಸವೇ ನಾಚಿದೆ
ಗಾಳಿಯ ಬೀಸಿನಲಿ ಗಾನವು ನೀನಾದೆ
ನನ್ನೆದೆ ಸ್ಪಂದನ ನಿನ್ನದೆ ಚೇತನ
ಪ್ರೇಮದ ಲೀಲೆಯಲ್ಲಿ ಜೀವ ಭಾವ ನಾಟ್ಯವಾಡಿದೆ
ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
ದೂರದ ಹೃದಯಗಳ ಸನಿಹದ ಬೇಗೆಯಲಿ
ವಿರಹದ ವೇದನೆ ಮುಗಿಲನು ಸೇರಿದೆ
ತೀರಿದ ದಾಹದಲಿ ಮೀರಿದ ಕಾತರಕೆ
ಮೇರೆಯೆ ಇಲ್ಲದ ತುಡಿತವು ತುಂಬಿದೆ
ಯಾವುದೋ ಮೋಡಿಯಲ್ಲಿ ಲೋಕವೆಲ್ಲ ತೂಗಿ ಸಾಗಿದೆ
ಪ್ರೇಮದ ಜೋಡಿ ಬಾಳಲಿ ಕೂಡಿ ಹಾಯಾಗಿ ಹಾಡಿದೆ
ಹೊಸ ಬಗೆ ಗುಂಗಲಿ ನಿಶೆ ತಾನೇರಿದಂತಿದೆ
ಆಸೆಯ ಭಾವ ಒಲವಿನ ಜೀವ
ಒಂದಾಗಿ ಬಂದಿದೆ
Written by: Rajan Nagendra, Vijaya Narasimha
instagramSharePathic_arrow_out􀆄 copy􀐅􀋲

Loading...